ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ವಸತಿ ಯೋಜನೆ ಅಪೂರ್ಣ: ಶಾಸಕರು ಗರಂ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ
Last Updated 10 ಆಗಸ್ಟ್ 2021, 4:13 IST
ಅಕ್ಷರ ಗಾತ್ರ

ಹಿರಿಯೂರು: ಕೊಳಚೆ ನಿರ್ಮೂಲನ ಮಂಡಳಿಯಿಂದ ಅನುಮೋದನೆ ಪಡೆದಿರುವ 447 ಮನೆಗಳನ್ನು ಎರಡು ವರ್ಷಗಳಾದರೂ ಗುತ್ತಿಗೆದಾರರು ಪೂರ್ಣಗೊಳಿಸದಿರುವುದಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೋಮವಾರ ಗರಂ ಆದರು.

ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಗರ ವಸತಿ ಯೋಜನೆಗಳ ಅನುಷ್ಠಾನದ ಬಗ್ಗೆ ನಡೆದ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

‘147 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ₹ 3.50 ಲಕ್ಷ ವೆಚ್ಚದ ಮನೆಗೆ ಎಸ್ಸಿ, ಎಸ್ಟಿ ಜನಾಂಗದವರು ವಂತಿಗೆ ರೂಪದಲ್ಲಿ ₹ 50 ಸಾವಿರ, ಇತರೆಯವರು₹ 2.70 ಲಕ್ಷ ವೆಚ್ಚದ ಮನೆಗೆ ₹ 1 ಲಕ್ಷ ಮುಂಗಡ ಪಾವತಿಸಬೇಕು. 199 ಫಲಾನುಭವಿಗಳು ಮನೆಗಳನ್ನು ಕಟ್ಟಿಕೊಳ್ಳಲು ಮುಂದೆ ಬರುತ್ತಿಲ್ಲ’ ಎಂದು ಕೊಳಚೆ ನಿರ್ಮೂಲನ ಮಂಡಳಿ ಎಂಜಿನಿಯರ್ ವೀರೇಶ್ ವಿವರಿಸಿದರು.

‘ಆಯಾ ವಾರ್ಡ್ ಸದಸ್ಯರು ಫಲಾನುಭವಿಗಳನ್ನು ಒಪ್ಪಿಸುವ ಕೆಲಸ ಮಾಡಬೇಕು. ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ನಡೆಸದಿದ್ದರೆ, ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕಾಗುತ್ತದೆ’ ಎಂದು ಪೂರ್ಣಿಮಾ ಎಚ್ಚರಿಕೆ ನೀಡಿದರು.

ಹಿರಿಯೂರು ನಗರದ ಹುಳಿಯಾರು ರಸ್ತೆ ಅಗಲೀಕರಣಕ್ಕೆ ಇರುವ ಅಡ್ಡಿಯನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಉಪ ವಿಭಾಗಾಧಿಕಾರಿ ಚಂದ್ರಯ್ಯ, ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ತಹಶೀಲ್ದಾರ್ ಶಿವಕುಮಾರ್, ನಗರಸಭೆ ಆಯುಕ್ತ ಉಮೇಶ್, ಸಿಪಿಐ ರಾಘವೇಂದ್ರ, ನಗರಸಭೆ ಎಇಇ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಸದಸ್ಯರಾದ ಪಲ್ಲವ, ಅಪೂರ್ವ ಚಿರಂಜೀವಿ, ಎಂ.ಡಿ. ಸಣ್ಣಪ್ಪ, ಬಾಲಕೃಷ್ಣ, ಕದ್ರು ಗಣೇಶ್, ಅಂಬಿಕಾ ಆರಾಧ್ಯ, ಬಿ.ಎನ್. ತಿಪ್ಪೇಸ್ವಾಮಿ, ಸಿ.ಎಂ.ಸ್ವಾಮಿ, ಮುಖಂಡರಾದ ಸರವಣ, ರಾಜಣ್ಣ, ಘಾಟ್ ರವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT