ಹೊಸದುರ್ಗ: ತಾಲ್ಲೂಕಿನ ಕಾರೇಹಳ್ಳಿಯಲ್ಲಿ ಪೂರ್ವಜರ ಸಮಾಧಿಗೆ ವಿಶೇಷ ಪೂಜೆ, ನೈವೇದ್ಯ (ಕಲ್ಲುಬಾಣ) ಅರ್ಪಿಸುವ ಮೂಲಕ ಭಾನುವಾರ ವಿಶೇಷವಾಗಿ ಏಕಾದಶಿ ಆಚರಿಸಲಾಯಿತು.

ಏಕಾದಶಿ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಶನಿವಾರದಿಂದ ಹಬ್ಬದ ಆಚರಣೆ ಆರಂಭವಾಯಿತು. ಶನಿವಾರ ದಾಸಪ್ಪ ಅವರ ಮನೆಗಳಲ್ಲಿ ಸಿಹಿ ಊಟ, ಭಾನುವಾರ ಎಲ್ಲರ ಮನೆಗಳಲ್ಲಿ ದಾಸಪ್ಪ ಅವರಿಗೆ ಊಟ ನೀಡಲಾಯಿತು. ಭಾನುವಾರ ಕಲ್ಲುಬಾಣ ಪೂಜೆ ನಡೆಯಿತು.

ಏಕಾದಶಿ ಹಬ್ಬದಂದು ಕಲ್ಲುಬಾಣ ಪೂಜೆಗೆ ಪ್ರಾಮುಖ್ಯ ನೀಡಲಾಗಿದೆ. ಭಾನುವಾರ ಬೆಳಿಗ್ಗೆಯಿಂದಲೇ ಕುಟುಂಬಸ್ಥರೆಲ್ಲ ಉಪವಾಸವಿದ್ದು, ಸಿಹಿ ತಿನಿಸು ತಯಾರಿಸಿ, ತಂಬಿಟ್ಟು, ಉಂಡೆಗಳನ್ನು ನೈವೇದ್ಯಕ್ಕಾಗಿ ತಯಾರಿಸಲಾಯಿತು. ನಂತರ ಮಧ್ಯಾಹ್ನದ ವೇಳೆಗೆ ಗ್ರಾಮಸ್ಥರೆಲ್ಲ ತಮ್ಮ ಪೂರ್ವಜರ ಸಮಾಧಿಯತ್ತ ಸಾಗಿದರು. ನಂತರ ಅಲ್ಲಿ ಸಮಾಧಿಗೆ ಹಣ್ಣು, ಎಡೆ ಇಟ್ಟು ಪೂಜೆ ಮಾಡಿ, ನೈವೇದ್ಯ ಅರ್ಪಿಸಲಾಯಿತು.

ಸೋಮವಾರ ಮನೆಗಳಲ್ಲಿ ಏಕಾದಶಿ ಹಬ್ಬ ಆಚರಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.