ಮಂಗಳವಾರ, ಜೂನ್ 28, 2022
24 °C

ಚಿತ್ರದುರ್ಗ: ಉತ್ಸವದಲ್ಲಿ ಮುರಿದು ಬಿದ್ದ ಸಿಡಿಕಂಬ, ವ್ಯಕ್ತಿಗೆ ಗಾಯ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ತಾಲ್ಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಿಡಿ ಉತ್ಸವದ ಸಿಡಿಕಂಬ ಮುರಿದುಬಿದ್ದು, ಸಿಡಿ ಆಡುತ್ತಿದ್ದ ಶಿವಕುಮಾರ್ ಎಂಬುವರು ಗಾಯಗೊಂಡಿದ್ದಾರೆ.

ಕರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿಡಿ ಆಡಲಾಗುತ್ತದೆ. ಗ್ರಾಮದ ದೇಗುಲದ ಸಮೀಪ ಶುಕ್ರವಾರ ಸಂಜೆ ಸಿಡಿ ಉತ್ಸವಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸಿಡಿಕಂಬ ಏರಿದ ಶಿವಕುಮಾರ್ ಸುತ್ತ ತಿರುಗುತ್ತಿದ್ದರು. ಈ ವೇಳೆ ಅವಘಡ ನಡೆದಿದೆ.

ಸಿಡಿಕಂಬದಿಂದ ಬಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿಕಂಬ ಮುರಿದು ಬೀಳುವ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು