ಚಿತ್ರದುರ್ಗ: ‘ತಾಲ್ಲೂಕಿನ ಭೀಮಸಮುದ್ರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಬ್ಬಿಣದ ಅದಿರು ತುಂಬಿದ ಲಾರಿಗಳ ಓಡಾಟ ತೀವ್ರಗೊಂಡಿರುವ ಕಾರಣ ಮನೆಮನೆಗೂ ದೂಳು ಮೆತ್ತಿಕೊಂಡಿದೆ. ಜೊತೆಗೆ ಸ್ಥಳೀಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ’ ಎಂದು ಸಮಾಜ ಪರಿವರ್ತನಾ ಸಂಸ್ಥೆ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ವಿವಿಧ ಸಂಘಟನೆಗಳ ಮುಖಂಡರು ಭೀಮಸಮುದ್ರ ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರ ಸಂವಾದ ನಡೆಸಿದರು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 2 ಕಿ.ಮೀ.ವರೆಗೂ ಕಾಲ್ನಡಿಗೆಯಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಿದರು. ಗ್ರಾಮಗಳ ಹೃದಯ ಭಾಗದಲ್ಲೇ ಅದಿರು ತುಂಬಿಕೊಂಡು ಓಡಾಡುತ್ತಿರುವ ಲಾರಿಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ಮುಖಂಡರು ಸ್ಥಳೀಯರ ಆರೋಗ್ಯದ ಬಗ್ಗೆ ವಿಚಾರಿಸಿದರು. ಈ ವೇಳೆ ಮಾತನಾಡಿದ ಆಸ್ಪತ್ರೆ ಸಿಬ್ಬಂದಿ ‘ಪಿಎಚ್ಸಿಗೆ ಬರುತ್ತಿರುವ 10 ರೋಗಿಗಳಲ್ಲಿ ಐವರು ಶ್ವಾಸಕೋಶ ಸಮಸ್ಯೆಯ ರೋಗಿಗಳೇ ಇರುತ್ತಾರೆ. ಗಣಿ ಲಾರಿಗಳ ದೂಳಿನಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಕುರಿತು ನಾವು ಕಡತ ಸಿದ್ಧಗೊಳಿಸಿದ್ದು, ಸಭೆಗಳಲ್ಲಿ ಮಂಡಿಸುತ್ತಿದ್ದೇವೆ’ ಎಂದರು.

ನಿದ್ದೆ ಭಂಗ: ‘ನಸುಕಿನ 3 ಗಂಟೆಗೆ ಗಣಿ ಲಾರಿಗಳ ಓಡಾಟ ಆರಂಭವಾಗುತ್ತದೆ. ಈ ವೇಳೆ ಖಾಲಿ ಲಾರಿಗಳು ಗಣಿ ಪ್ರದೇಶದತ್ತ ತೆರಳುತ್ತವೆ. ರಸ್ತೆಯೂ ಹಾಳಾಗಿರುವ ಕಾರಣ ಖಾಲಿ ಲಾರಿಗಳ ಭಾರಿ ಸದ್ದು ಕಿವಿಗೆ ರಾಚುತ್ತದೆ. ಇದರಿಂದ ನಿದ್ದೆಗೆ ತೊಂದರೆಯಾಗುತ್ತದೆ. ಬೆಳಿಗ್ಗೆ ಎದ್ದು ಮಕ್ಕಳು ಓದಿಕೊಳ್ಳುವುದಕ್ಕೂ ತೊಂದರೆಯಾಗುತ್ತದೆ. ಮಕ್ಕಳು ಪರೀಕ್ಷೆ ವೇಳೆ ಓದಿಕೊಳ್ಳಲು ಪಾಡು ಪಡುತ್ತಾರೆ. ಕೆಲವರು ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಾರೆ’ ಎಂದು ಗ್ರಾಮದ ಮಹಿಳೆಯೊಬ್ಬರು ಮುಖಂಡರ ಬಳಿ ಅಳಲು ತೋಡಿಕೊಂಡರು.

‘ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಕಫದ ಸಮಸ್ಯೆ ಉಂಟಾಗಿ ಬಳಲುವಂತಾಗಿದೆ. ಮಕ್ಕಳು ತಿಂಗಳಿಗೆ 2–3 ಬಾರಿ ಕೆಮ್ಮಿನಿಂದ ತೊಂದರೆ ಅನುಭವಿಸುತ್ತಿದ್ದಾರೆ. ರೋಗ ನಿರೋಧಕ ಸಿರಪ್ ಹಾಕುತ್ತಿರುವ ಅವರ ಆರೋಗ್ಯ ಹದಗೆಡುತ್ತಿದೆ. ಗಣಿ ಲಾರಿಗಳ ದೂಳಿನಿಂದಾಗಿ ನಮ್ಮ ಬದುಕು ನರಕಸದೃಶವಾಗಿದೆ. ಹೇಗಾದರೂ ಮಾಡಿ ಗಣಿ ಲಾರಿಗಳ ಓಡಾಟ ನಿಯಂತ್ರಿಸಿ’ ಎಂದು ಅವರು ಮನವಿ ಮಾಡಿದರು.

ಆತಂಕಕಾರಿ: ‘ಭೀಮಸಮುದ್ರ ಗ್ರಾಮದ ಆಸುಪಾಸಿನಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರು ತೆಗೆಯುತ್ತಿರುವ ಬಗ್ಗೆ, ಊರಿನ ಸಣ್ಣಪುಟ್ಟ ರಸ್ತೆಗಳಲ್ಲೂ ಗಣಿ ಲಾರಿ ಓಡಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಇದನ್ನು ಪರಿಶೀಲಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಪರಿಸ್ಥಿತಿಯನ್ನು ಸಾಕ್ಷಾತ್ ಪರಿಶೀಲನೆ ನಡೆಸಿದಾಗ ಜನರ ಸಮಸ್ಯೆ ಆತಂಕಕಾರಿಯಾದುದು ಎಂಬುದು ತಿಳಿಯಿತು. ಜಿಲ್ಲಾಡಳಿತ ಗಣಿ ಲಾರಿಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು’ ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

‘ನಾವು ಗಣಿಗಾರಿಕೆಗೆ ವಿರುದ್ಧವಿಲ್ಲ. ಆದರೆ, ಗಣಿಗಾರಿಕೆ ಹೆಸರಿನಲ್ಲಿ ಪ್ರಾಕೃತಿಕ ಸಂಪನ್ಮೂಲವನ್ನು ಲೂಟಿ ಮಾಡುವುದಕ್ಕೆ ಅವಕಾಶ ನೀಡಬಾರದು. ನಿಯಮಾನುಸಾರ ಕಬ್ಬಿಣದ ಅದಿರನ್ನು ಮುಚ್ಚಿದ ರೀತಿಯಲ್ಲಿ ಸಾಗಣೆ ಮಾಡಬೇಕು. ಆದರೆ, ತೆರೆದ ಲಾರಿಗಳಲ್ಲಿ ಸಾಗಣೆ ಮಾಡುತ್ತಿರುವುದು ಸರಿಯಲ್ಲ. ಭೀಮಸಮುದ್ರದಲ್ಲಿ ರಾಜಕಾರಣಿಗಳ ಮನೆಗಳಿವೆ. ಅವರೆಲ್ಲರೂ ಗಣಿ ಕಂಪನಿಗಳಿಗೆ ಲಾರಿಗಳನ್ನು ಬಾಡಿಗೆಗೆ ಬಿಟ್ಟಿದ್ದಾರೆ. ಲಾರಿ ಮಾಲೀಕರು ಗಣಿ ಕಂಪನಿಗಳಿಂದ ಲಾಭ ಅನುಭವಿಸುತ್ತಿದ್ದಾರೆ. ಆದರೆ, ಬಡಜನರು ಆರೋಗ್ಯ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.

‘ಗಣಿ ಲಾರಿಗಳ ಓಡಾಟದಿಂದ ಕೃಷಿ ಮೇಲೆ ಮಾರಕ ಪರಿಣಾಮ ಬೀರಿದೆ. ವ್ಯಾಪಕ ದೂಳಿನಿಂದ ಬೀಜ ಮೊಳಕೆಯೊಡೆಯುವ ಮೊದಲೇ ಬೆಳೆ ಹಾಳಾಗುತ್ತಿದೆ. ಕೃಷಿ ಉತ್ಪನ್ನದ ಇಳುವರಿ ಕಡಿಮೆಯಾಗುತ್ತಿದೆ. ಹಣ್ಣು ತರಕಾರಿಗಳೂ ಮಲಿನಗೊಳ್ಳುತ್ತಿವೆ. ರೈತರು ಈ ಬಗ್ಗೆ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

ಈ ವೇಳೆ ಗಣಿಬಾಧಿತ ಪ್ರದೇಶಗಳ ಪುನಃಶ್ಚೇತನ ಹೋರಾಟ ಸಮಿತಿ ಮುಖಂಡ ಅಭಿರುಚಿ ಗಣೇಶ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ಸಿ.ಎನ್.ದೀಪಕ್, ಸರ್ವೋದಯ ಕರ್ನಾಟಕ ಪಕ್ಷದ ಜೆ.ಯಾದವರೆಡ್ಡಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಮಲ್ಲಿಕಾರ್ಜುನ ಭಟ್ಟರಹಳ್ಳಿ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.

ಪ್ರಶ್ನೆ ಮಾಡುವವರಿಗೆ ಬೆದರಿಕೆ

ಜನಾಂದೋಲನಗಳ ಮಹಾ ಮೈತ್ರಿ ಸಂಘಟನೆ ಸಂಚಾಲಕ ಉಗ್ರನರಸಿಂಹೇಗೌಡ ಮಾತನಾಡಿ ‘ಭೀಮಸಮುದ್ರ ಭಾಗದಲ್ಲಿ ಗಣಿ ಲಾರಿಗಳ ಸಂಚಾರ ಲಾಬಿ ರೂಪ ಪಡೆದುಕೊಂಡಿದೆ. ಸ್ಥಳೀಯರು ಲಾರಿಗಳ ಓಡಾಟವನ್ನು ಪ್ರಶ್ನೆ ಮಾಡಿದರೆ ಲಾರಿಗಳ ಮಾಲೀಕರು ಚಾಲಕರು ಗುತ್ತಿಗೆದಾರರು ಬೆದರಿಕೆ ಹಾಕುತ್ತಾರೆ. ರೌಡಿಗಳ ರೀತಿಯಲ್ಲಿ ಜನರಿಗೆ ಹೆದರಿಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಂಥವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು. ‘ಗಣಿ ಲಾರಿಗಳು ಓಡಾಡುತ್ತಿರುವ ರಸ್ತೆಗಳ ಸ್ಥಿತಿ ನೋಡಿದರೆ ಭಯವಾಗುತ್ತದೆ. ಜನರು ಇಲ್ಲಿ ಹೇಗೆ ಓಡಾಡುತ್ತಿದ್ದಾರೆ ಹೇಗೆ ಬದುಕುತ್ತಿದ್ದಾರೆ ಎಂಬ ಭೀತಿಯಾಗುತ್ತದೆ. ಗುಂಡಿಬಿದ್ದ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆಯೂ ತೀವ್ರಗೊಂಡಿರುವ ಬಗ್ಗೆ ಜನರು ದೂರಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ಮಾಡಬೇಕು. ಸ್ಥಳೀಯರು ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.