ಚಳ್ಳಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆ ಹಾಗೂ ತಾಲ್ಲೂಕಿನಲ್ಲಿ ಕೈಗೊಂಡಿರುವ ಶಾಶ್ವತ ಅಭಿವೃದ್ಧಿ ಕೆಲಸಗಳೇ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

‘ಬಿ.ಎನ್. ಚಂದ್ರಪ್ಪ, ಒಮ್ಮೆ ಪರಭವಗೊಂಡಿದ್ದರೂ ಸದಾ ಕ್ಷೇತ್ರದ ಜನರ ಸಂಕರ್ಪದಲ್ಲಿದ್ದು ಅಪಾರ ಪ್ರೀತಿ-ವಿಶ್ವಾಸಗಳಿಸಿದ್ದಾರೆ. ಸಂಸದರಾಗಿದ್ದಾಗ ಕ್ಷೇತ್ರದಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಚುನಾವಣೆಯಲ್ಲಿ ಅವರ ಗೆಲುವು ಸುಲಭವಾಗಲಿದೆ. ಅಧಿಕಾರದ ದಾಹಕ್ಕಾಗಿ ವಿರೋಧ ಪಕ್ಷಗಳು ಬಡಜನರಿಗೆ ಅನುಕೂಲವಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿವೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಶಾಶ್ವತ ಕುಡಿಯುವ ನೀರು ಮತ್ತು ರೈತರ ಕೃಷಿ ಚಟವಟಿಕೆಗೆ ಅನುಕೂಲ ಮಾಡಿಕೊಡುವ ಸಲುವಾಗಿ ತಾಲ್ಲೂಕಿನ ವೇದಾವತಿ ನದಿ ಭಾಗದಲ್ಲಿ ಇನ್ನೂ 3-4 ಕಡೆಗೆ ಬ್ಯಾರೇಜ್ ನಿರ್ಮಿಸಲು ಉದ್ದೇಶಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ ಹೆಚ್ಚಿನ ನೀರು ಹರಿಸಲು ಹಾಗೂ ಕಾಮಗಾರಿ ಪ್ರಗತಿ ಹಂತದಲ್ಲಿರುವ ತುಂಗಾಭದ್ರಾ ಹಿನ್ನೀರು ಯೋಜನೆ ಮೂಲಕ ಮೊಳಕಾಲ್ಮುರು, ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕಿನ ಹಲವು ಕೆರೆಗಳಿಗೆ 4-5 ತಿಂಗಳಲ್ಲಿ ನೀರು ತುಂಬಿಸಲು ಸರ್ಕಾರ ಬದ್ಧ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ವೀರಭದ್ರಯ್ಯ, ಮಾಜಿ ಅಧ್ಯಕ್ಷ ಸಿ. ವೀರಭದ್ರಬಾಬು, ಟಿಎಟಿ ಪ್ರಭುದೇವ್, ಪರಶುರಾಂಪುರ ಹೋಬಳಿ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ಕಾಂಗ್ರೆಸ್ ಮುಖಂಡ ಆರ್.ಪ್ರಸನ್ನಕುಮಾರ್, ನಗರಸಭೆ ನಾಮ ನಿರ್ದೇಶಕ ಸಮಿತಿ ಸದಸ್ಯ ನೇತಾಜಿ ಆರ್.ಪ್ರಸನ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.