ಮೊಳಕಾಲ್ಮುರು: ತಾಲ್ಲೂಕಿನ ಜೀವನಾಡಿ ಖ್ಯಾತಿಯ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿದ್ದು ಬುಧವಾರ ಮಧ್ಯಾಹ್ನ 1 ಗಂಟೆಯಿಂದ ಹೆಚ್ಚುವರಿ ನೀರನ್ನು ಗೇಟ್ಗಳ ಮೂಲಕ ಹೊರ ಬಿಡಲಾಗುತ್ತಿದೆ.

ಅರ್ಧ ಟಿಎಂಸಿ ಅಡಿ ಸಾಮರ್ಥ್ಯದ, 33 ಅಡಿ ಎತ್ತರದ ಜಲಾಶಯದಲ್ಲಿ ಒಂದು ವಾರದಿಂದ 32.5 ಅಡಿ ನೀರು ಸಂಗ್ರಹವಾಗಿತ್ತು. ಯಾವುದೇ ಕ್ಷಣದಲ್ಲಾದರೂ ನೀರು ಹೊರ ಬಿಡಬಹುದು ಎಂದು ಜಲಾಶಯ ನಿರ್ವಹಣೆ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಜಲಾಶಯ ಹಿಂಭಾಗದ ಜಗಳೂರು ಮತ್ತು ಕೂಡ್ಲಿಗಿ ಭಾಗದಲ್ಲಿ ಮಂಗಳವಾರ ಮಳೆಯಾಗಿರುವ ಪರಿಣಾಮ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.

ಮುನ್ನೆಚ್ಚರಿಕೆಯಾಗಿ 5 ಗೇಟ್ಗಳ ಪೈಕಿ 3 ಗೇಟ್ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ ಅಂದಾಜು 1,500 ಕ್ಯುಸೆಕ್ ಒಳಹರಿವು ಇದ್ದು, 2,000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಒಳಹರಿವು ಕಡಿಮೆಯಾದಲ್ಲಿ ತಕ್ಷಣ ಗೇಟ್ ಬಂದ್ ಮಾಡಲಾಗುವುದು ಎಂದು ಎಂಜಿನಿಯರ್ ಜಿ. ರಮೇಶ್ ಮಾಹಿತಿ ನೀಡಿದರು.

ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಜಲಾಶಯವನ್ನು ಕಣ್ತುಂಬಿಕೊಳ್ಳಲು ದೌಡಾಯಿಸುತ್ತಿದ್ದಾರೆ. ನೀರು ಹೊರ ಹರಿಯುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2 ತಿಂಗಳು ಮುಂಚಿತವಾಗಿ ಜಲಾಶಯ ತುಂಬಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.