ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ನೆರವೇರಿದ ಪ್ರಾಚೀನ ವಚನಗಳ ಹಸ್ತಪ್ರತಿಯ ಮೆರವಣಿಗೆ
ಶೂನ್ಯ ಪೀಠಾರೋಹಣದಲ್ಲಿ ಹೆಜ್ಜೆ ಹಾಕಲು ಸಿದ್ಧರಾಗಿದ್ದ ವೀರಗಾಸೆ ಕಲಾವಿದರು
ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ
ಶ್ರೀಮಠದ ಜಯದೇವ ಜಂಗೀಕುಸ್ತಿ ದೇಶದಲ್ಲಿಯೇ ಪ್ರಖ್ಯಾತಿಗಳಿಸಿದೆ. ಕುಸ್ತಿಯಲ್ಲಿ ಮಕ್ಕಳು ಮಹಿಳೆಯರು ಭಾಗವಹಿಸಿರುವುದು ನೋಡಿದರೆ ಕುಸ್ತಿಯ ಮಹತ್ವವನ್ನು ಕಾಣಬಹುದಾಗಿದೆ
ಬಸವಕುಮಾರ ಸ್ವಾಮೀಜಿ ಆಡಳಿತ ಮಂಡಳಿ ಸದಸ್ಯರು
ಜಯದೇವ ಜಂಗೀಕುಸ್ತಿಗೆ ಐವತ್ತು ವರ್ಷಗಳ ಇತಿಹಾಸವಿದೆ. ದೇಶದ ಹಲವು ರಾಜ್ಯಗಳಿಂದ ಬಂದು ಕುಸ್ತಿ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿರುವುದು ಸಂತಸದ ಸಂಗತಿಯಾಗಿದೆ
ಬಸವನಾಗಿದೇವ ಸ್ವಾಮೀಜಿ ಛಲವಾದಿ ಗುರುಪೀಠ
ಜಯದೇವ ಜಂಗೀಕುಸ್ತಿ
ಗಮ್ಮತ್ತು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಶುಕ್ರವಾರ ಜಯದೇವ ಜಂಗೀಕುಸ್ತಿ ನಡೆಯಿತು. ಮಧ್ಯಪ್ರದೇಶ ಉತ್ತರ ಪ್ರದೇಶ ಮಹಾರಾಷ್ಟ್ರ ಕೊಲ್ಲಾಪುರ ಆಂಧ್ರಪ್ರದೇಶದಿಂದ ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಜಂಗೀ ಕುಸ್ತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸಿ ತಮ್ಮ ನೆಚ್ಚಿನ ಪೈಲ್ವಾನ್‌ರನ್ನು ಹುರಿದುಂಬಿಸಿ ಕುಸ್ತಿಯ ಪಟ್ಟುಗಳನ್ನು ನೋಡಿ ಕೇಕೆ ಹಾಕುತ್ತ ಕುಣಿದು ಕುಪ್ಪಳಿಸಿದರು. ಮಹಿಳೆಯರ ವಿಭಾಗದಲ್ಲಿ ಬಾಗಲಕೋಟೆಯ ಐಶ್ವರ್ಯಾ ಪ್ರಥಮ ಸ್ಥಾನಗಳಿಸುವ ಮೂಲಕ ಒನಕೆ ಓಬವ್ವ ಪ್ರಶಸ್ತಿ ದಾವಣಗೆರೆಯ ಆಕಾಂಕ್ಷ ದ್ವಿತೀಯ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಸಾಂಗ್ಲಿಯ ಪ್ರದೀಪ್ ಠಾಕೂರ್ ಪ್ರಥಮ ಸ್ಥಾನದ ಮೂಲಕ ಚಿನ್ಮೂಲಾದ್ರಿ ಕೇಸರಿ ಪ್ರಶಸ್ತಿ ಮಧ್ಯಪ್ರದೇಶದ ರೋಹಿತ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ತೀರ್ಪುಗಾರರಾಗಿ ಪೈಲ್ವಾನ್ ತಿಪ್ಪೇಸ್ವಾಮಿ ರಫೀಜ್ ಹೋಳಿ ಮರಡಿ ಅಮೃತಣ್ಣ ಮೈಸೂರು ಭರತ್ ಮೂರ್ತಿ ಕಾರ್ಯ ನಿರ್ವಹಿಸಿದರು.