ಬೆಂಗಳೂರು ತಲುಪಲು ಐದೂವರೆ ಗಂಟೆ
165 ಕಿ.ಮೀ. ಅಂತರದಲ್ಲಿರುವ ಬೆಂಗಳೂರು ತಲುಪಲು ಹಿರಿಯೂರಿನಿಂದ ಕಾರಿನಲ್ಲಿ ಹೆಚ್ಚೆಂದರೆ ಎರಡೂವರೆ ಗಂಟೆ ಸಾಕು. ತಡೆರಹಿತ ಬಸ್‌ಗಳೇ 3 ಗಂಟೆ ಒಳಗೆ ಮೆಜೆಸ್ಟಿಕ್‌ಗೆ ಹೋಗುತ್ತವೆ. ಆದರೆ ಅಂಡರ್ ಪಾಸ್‌ಗಳ ಅವ್ಯವಸ್ಥೆಯ ಕಾರಣಕ್ಕೆ ಬೆಂಗಳೂರಿಗೆ ಹೋಗಿಬರುವ ವಿಚಾರದಲ್ಲಿ ಇಷ್ಟೇ ಸಮಯ ಎಂದು ಹೇಳಲಾಗದು. ಕೆಲವೊಮ್ಮೆ ಐದೂವರೆ ಗಂಟೆ ಬೇಕು. ಕೆ.ಆರ್. ಹಳ್ಳಿ ತುಮಕೂರು ಪ್ರವೇಶ ದ್ವಾರದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸಿ ಅರ್ಧಕ್ಕೇ ನಿಲ್ಲಿಸಿರುವ ಕಾರಣ ಪ್ರಯಾಣಿಕರು ಯಾತನೆ ಅನುಭವಿಸಬೇಕಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಇಲ್ಲಿನ ಸಮಸ್ಯೆ ಬಗ್ಗೆ ದೆಹಲಿಯಲ್ಲಿ ಗಟ್ಟಿ ದನಿ ಎತ್ತಬೇಕು. ಸಿ.ಬಿ. ಪಾಪಣ್ಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜವನಗೊಂಡನಹಳ್ಳಿ