ಭಾನುವಾರ, ಆಗಸ್ಟ್ 14, 2022
26 °C
ಗ್ರಾಮ ಪಂಚಾಯಿತಿ ಚುನಾವಣೆ: ಮನೆ, ಮನೆ ಪ್ರಚಾರವೂ ಚುರುಕು

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್ ಪೇಟೆ: ಸೋಂಪುರ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಹುತೇಕ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.

ತಮ್ಮ ವಾಟ್ಸ್ಆ್ಯಪ್‌, ಫೇಸ್‌ಬುಕ್‌ ಸ್ಟೇಟಸ್‌ಗಳು ಹಾಗೂ ಫೇಸ್‌ಬುಕ್‌ ಖಾತೆಗಳಲ್ಲಿ  ಕರಪತ್ರಗಳನ್ನು ಪೋಸ್ಟ್‌ ಮಾಡಿ, ಮತಯಾಚನೆ ಮಾಡುತ್ತಿದ್ದಾರೆ.

ಕೆಲ ಅಭ್ಯರ್ಥಿಗಳು ತಮ್ಮ ಹಿಂಬಾಲಕರು, ಆತ್ಮೀಯರು ಹಾಗೂ ಊರಿನ ಯುವಕರಿಗೆ ಟ್ಯಾಗ್ ಮಾಡುವುದು ಹಾಗೂ ವಾಟ್ಸ್‌ ಆ್ಯ‍ಪ್‌‌ನಲ್ಲಿ ಸಂದೇಶಗಳನ್ನು ರವಾನಿಸಿ, ಮತದಾರರನ್ನು ಸೆಳೆಯುತ್ತಿದ್ದಾರೆ.

‘ಯುವ ಮತದಾರರ ಬಳಿ ಸ್ಮಾರ್ಟ್‌ ಮೊಬೈಲ್‌ ಇದ್ದೇ ಇದೆ. ಅವರು ಸಾಮಾಜಿಕ ಜಾಲತಾಣಗಳನ್ನೂ ಬಳಸುತ್ತಾರೆ. ಹಾಗಾಗಿ, ಸಾಮಾಜಿಕ ಜಾಲತಾಣಗಳ ಮೂಲಕ ಏಕಕಾಲದಲ್ಲಿ  ಸಾವಿರಾರು ಮತದರರನ್ನು ತಲುಪಬಹುದು. ಕರಪತ್ರಗಳನ್ನು ಮುದ್ರಿಸಿ ಹಂಚುವುದಕ್ಕಿಂತ ಇದು ಸರಳ’ ಎಂದು ಹೊನ್ನೇನಹಳ್ಳಿ ಪಂಚಾಯಿತಿ ಚುನಾವಣೆಯ ಅಭ್ಯರ್ಥಿಯೊಬ್ಬರು ತಿಳಿಸಿದರು.

ಮನೆ ಮನೆ ಪ್ರಚಾರವೂ ಜೋರು: ಒಂದು ಕಡೆ ‌ಅಭ್ಯರ್ಥಿಯು ಒಂದಷ್ಟು ಮಂದಿಯನ್ನು ಹಿಂದಿಟ್ಟುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದರೆ, ಮತ್ತೊಂದು ಕಡೆ ಅವರ ಕುಟುಂಬಸ್ಥರು ಮನೆ ಮನೆಗೆ ಭೇಟಿ ನೀಡುತ್ತಾ, ಮತ ಕೇಳುತ್ತಿದ್ದಾರೆ.

ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮತದಾರರ ಗಮನಕ್ಕೆ ತರುತ್ತಾ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಬಗ್ಗೆ ಆಶ್ವಾಸನೆ ನೀಡುತ್ತಿದ್ದಾರೆ. ಕರಪತ್ರಗಳನ್ನು ಹಿಡಿದು ಮನೆ ಮನೆಯನ್ನೂ ಸಂಪರ್ಕಿಸುತ್ತಾ, ತಮ್ಮ ಚಿಹ್ನೆಗಳನ್ನು ಮತದಾರರಿಗೆ ತೋರಿಸಿ ಮತ ಯಾಚಿಸುತ್ತಿದ್ದಾರೆ. 

ಇಬ್ಬರು ಅವಿರೋಧ ಆಯ್ಕೆ

ಯಲಹಂಕ: ಜಾಲಾ ಹೋಬಳಿಯ ಮೀನುಕುಂಟೆ ಹೊಸೂರು ಗ್ರಾಮ ಪಂಚಾಯಿತಿ  ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೈನಹಳ್ಳಿ ಗ್ರಾಮದ ಶುಭ ನರಸಿಂಹಮೂರ್ತಿ (ಎಸ್.ಸಿ) ಹಾಗೂ ಸೌಮ್ಯ.ವಿ (ಸಾಮಾನ್ಯ) ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರು.

ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಒಟ್ಟು 21 ಸದಸ್ಯರ ಬಲ ಅಗತ್ಯವಿರುವ ಗ್ರಾಮ ಪಂಚಾಯಿತಿಗೆ 94 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ 46 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು