ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ತುಂಬೆ ಅಣೆಕಟ್ಟೆಗೆ ಎಎಂಆರ್‌ ಜಲಾಶಯದ ನೀರು

Published 21 ಮೇ 2024, 5:39 IST
Last Updated 21 ಮೇ 2024, 5:39 IST
ಅಕ್ಷರ ಗಾತ್ರ

ಮಂಗಳೂರು: ತುಂಬೆ ಜಲಾಶಯಕ್ಕೆ  ಶಂಭೂರಿನ ಎಎಂಆರ್‌ ಜಲಾಶಯದಿಂದ ನೀರು ಹರಿಸುವಂತೆ ಜಿಲ್ಲಾಧಿಕಾರಿ ಸೋಮವಾರ ಆದೇಶ ಮಾಡಿದ್ದಾರೆ.

ತುಂಬೆ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣವು ಸೋಮವಾರ 3.60 ಮೀಟರ್‌ಗೆ ಇಳಿಕೆಯಾಗಿದೆ.ಇದನ್ನು ಬಳಸಿ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನು 8ರಿಂದ 10 ದಿನಗಳವರೆಗೆ ಮಾತ್ರ ನೀರು ಪೂರೈಸಬಹುದು. ಜಿಲ್ಲೆಯ ವಿವಿಧ ಕಡೆ ಮಳೆಯಾಗಿದ್ದರಿಂದ ಎಎಂಆರ್‌ ಜಲಾಶಯಕ್ಕೆ ನೀರು ಹರಿದುಬರುತ್ತಿದ್ದು, ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಎಎಂಆರ್ ಜಲಾಶಯದಲ್ಲಿ ನೀರಿನ ಮಟ್ಟವು ಸೋಮವಾರ 18.60 ಮೀಗಳಷ್ಟು ಇತ್ತು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. 

‘ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ, ಎಎಂಆರ್ ಜಲಾಶಯದ ನೀರಿನ ಮಟ್ಟವನ್ನು 17 ಮೀಟರ್‌ನಷ್ಟು ನಿರ್ವಹಿಸಿ, ಹೆಚ್ಚುವರಿ ನೀರನ್ನು ತುಂಬೆ ಅಣೆಕಟ್ಟಿಗೆ ಬಿಡುಗಡೆ ಮಾಡಬೇಕು’ ಎಂದು ಜಿಲ್ಲಾಧಿಕಾರಿಯವರ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್‌ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT