ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಂಗಳೂರು | ಬೀದಿ ಬದಿ ವ್ಯಾಪಾರ: ಸವಲತ್ತು ಕಲ್ಪಿಸಲು ಪಾಲಿಕೆ ಮೀನಮೇಷ

ಸಮೀಕ್ಷೆ ನಡೆಸಿ 3 ವರ್ಷದ ಬಳಿಕವೂ ವಿತರಿಸಿಲ್ಲ ಗುರುತಿನಚೀಟಿ, ಮಳಿಗೆ ನಿರ್ಮಿಸಿದರೂ ಹಂಚಿಕೆ ಮರೀಚಿಕೆ
Published : 16 ಡಿಸೆಂಬರ್ 2024, 7:08 IST
Last Updated : 16 ಡಿಸೆಂಬರ್ 2024, 7:08 IST
ಫಾಲೋ ಮಾಡಿ
Comments
ಮಂಗಳೂರಿನ ಸ್ಟೇಟ್ ಬ್ಯಾಂಕ್‌ ಬಳಿ ಬೀದಿಬದಿ ವ್ಯಾಪಾರಗಳಿಗಾಗಿ ಪಾಲಿಕೆ ನಿರ್ಮಿಸಿರುವ ಮಳಿಗೆಗಳು : ಪ್ರಜಾವಾಣಿ ಚಿತ್ರ
ಮಂಗಳೂರಿನ ಸ್ಟೇಟ್ ಬ್ಯಾಂಕ್‌ ಬಳಿ ಬೀದಿಬದಿ ವ್ಯಾಪಾರಗಳಿಗಾಗಿ ಪಾಲಿಕೆ ನಿರ್ಮಿಸಿರುವ ಮಳಿಗೆಗಳು : ಪ್ರಜಾವಾಣಿ ಚಿತ್ರ
ಮಂಗಳೂರಿನ ಸ್ಟೇಟ್ ಬ್ಯಾಂಕ್‌ ಬಳಿ ಬೀದಿಬದಿ ವ್ಯಾಪಾರದ ಭರಾಟೆ : ಪ್ರಜಾವಾಣಿ ಚಿತ್ರ
ಮಂಗಳೂರಿನ ಸ್ಟೇಟ್ ಬ್ಯಾಂಕ್‌ ಬಳಿ ಬೀದಿಬದಿ ವ್ಯಾಪಾರದ ಭರಾಟೆ : ಪ್ರಜಾವಾಣಿ ಚಿತ್ರ
ಬೀದಿ ಬದಿ ವ್ಯಾಪಾರಕ್ಕಾಗಿ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದ ಬಳಿ ನಿರ್ಮಿಸಿದ ಮಳಿಗೆಗಳನ್ನು ಇದೇ 21ಕ್ಕೆ ಲೋಕಾರ್ಪಣೆ ಮಾಡಲು ಚಿಂತನೆ ನಡೆಸಿದ್ದೇವೆ. ಅದನ್ನು ಬಳಸಿ ಬೀದಿ ಬದಿ ವ್ಯಾಪಾರಿಗಳು ಉತ್ತಮ ಬದುಕು ಕಟ್ಟಿಕೊಳ್ಳಬೇಕು
ಆನಂದ್‌ ಸಿ.ಎಲ್‌ ಪಾಲಿಕೆ ಆಯುಕ್ತ
ನಾನು 25 ವರ್ಷಗಳಿಂದ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದೇನೆ. ಸಮೀಕ್ಷೆ ನಡೆಸಿ ಮೂರು ವರ್ಷದ ಬಳಿಕವೂ ನನಗೆ ಗುರುತಿನ ಚೀಟಿ ನೀಡಿಲ್ಲ. ನಮಗೆ ಕಾನೂನುಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಪಾಲಿಕೆ ಒದಗಿಸಬೇಕು
ವಿಜಯ್‌ ಕುಮಾರ್‌ ಬೀದಿ ಬದಿ ವ್ಯಾಪಾರಿ
ಬೀದಿ ಬದಿ ವ್ಯಾಪಾರಕ್ಕೆ ಪ್ರತಿ ವಾರ್ಡ್‌ನಲ್ಲೂ ಪ್ರತ್ಯೇಕ ವಲಯ ಗುರುತಿಸಿ ಮಳಿಗೆ ನಿರ್ಮಿಸಬೇಕು. ಬೀದಿ ಬದಿ ವ್ಯಾಪಾರದಲ್ಲಿ ನಿಜವಾಗಿಯೂ ತೊಡಗಿಸಿಕೊಂಡವರಿಗಷ್ಟೇ ಗುರುತಿನ ಚೀಟಿ ನೀಡಬೇಕು ಈ ವಿಚಾರದಲ್ಲಿ ರಾಜಕೀಯ ಸಲ್ಲದು
ಸಂತೋಷ್‌ ಬೀದಿ ಬದಿ ವ್ಯಾಪಾರಿ
ವ್ಯಾಪಾರ ವಲಯ– ಎಲ್ಲೆಲ್ಲಿ?
ಸ್ಧಳ; ವ್ಯಾಪಾರ; ಮಳಿಗೆಗಳ ಸಂಖ್ಯೆ; ವಾರ್ಡ್ ಸಂಖ್ಯೆ ನೆಹರೂ ಅವೆನ್ಯೂ ರಸ್ತೆ;ಹಣ್ಣು ಹಂಪಲು;14;29 ಕರಾವಳಿ ಉತ‌ಸವ ಮೈದಾನ ಬಳಿ; ಆಹಾರ;17;29 ಮಣ್ಣಗುಡ್ಡೆ ಹಾಪ್‌ಕಾಮ್ಸ್ ಬಳಿ;ಮಿಶ್ರ ವ್ಯಾಪಾರ;15;28 ಅಳಕೆ ಮಾರುಕಟ್ಟೆ ಬಳಿ;ಮಿಶ್ರ ವ್ಯಾಪಾರ;35;42 ಸ್ಟೇಟ್ ಬ್ಯಾಂಕ್ ಬಳಿ;ಮಿಶ್ರ ವ್ಯಾಪಾರ;137;46 ಪಂಪ್‍ವೆಲ್ ಜಂಕ್ಷನ್ ಕಂಕನಾಡಿ;ಮಿಶ್ರ ವ್ಯಾಪಾರ;20;48 ಪಂಪ್ ವೆಲ್ ಮೇಲ್ಸೇತುವೆ ಬಳಿ;ಮೀನು ವ್ಯಾಪಾರ;2;48 ಕೊಟ್ಟಾರಕ್ರಾಸ್;ಮಿಶ್ರ ವ್ಯಾಪಾರ;5;31 ಬಿಜೈ ಕೆ.ಇ.ಬಿ. ಕಚೇರಿ ಬಳಿ;ಮಿಶ್ರ ವ್ಯಾಪಾರ;20;31 ನಂದಿಗುಡ್ಡೆ ಕೋಟಿಚೆನ್ನಯ್ಯವೃತ್ತದ ಬಳಿ;ಮಿಶ್ರ ವ್ಯಾಪಾರ;10;55ಪದವಿನಂಗಡಿ - ಶರಬತ್ತುಕಟ್ಟೆ (ಕೆ.ಪಿ.ಟಿ. ಬಳಿ);ಫುಡ್ ಸ್ಟ್ರೀಟ್;15;22 ಮೇರಿ ಹಿಲ್ ಪೆಟ್ರೋಲ್ ಬಂಕ್‌ ಬಳಿ;ಮಿಶ್ರ ವ್ಯಾಪಾರ;10;22 ದೇರೆಬೈಲ್ ಪ್ರಶಾಂತ್ ನಗರ ರಸ್ತೆ ಚರ್ಚ್ ಬಳಿ;ಮಿಶ್ರ ವ್ಯಾಪಾರ;15;23 ಬೊಂದೆಲ್‍ಜಂಕ್ಷನ್;ಮಿಶ್ರ ವ್ಯಾಪಾರ;5;14 ಕಾವೂರು–ಮರಕಡ ರಸ್ತೆ; ಮಿಶ್ರ ವ್ಯಾಪಾರ;10;14 ಕಾವೂರು ಮಾರುಕಟ್ಟೆ ಬಳಿ;ಮಿಶ್ರ ವ್ಯಾಪಾರ;10;15 ನಂತೂರು ಪದವು ನೀರಿನ ಟ್ಯಾಂಕಿ ಬಳಿ;ಮಿಶ್ರ ವ್ಯಾಪಾರ;10;32 ಕದ್ರಿ ಮುಖ್ಯರಸ್ತೆ ಬಳಿ;ಮಿಶ್ರ ವ್ಯಾಪಾರ;5;31 ಕುಂಟಿಕಾನ ಕೆಎಸ್ಆರ್‌ಟಿಸಿ ಡಿಪೊ ಬಳಿ;ಮಿಶ್ರ ವ್ಯಾಪಾರ;20;31 ಪದವು ಬಸ್ ಸ್ಟಾಂಡ್ ಪಕ್ಕ; ಆಹಾರ;5;32 ಶರಬತ್ತು ಕಟ್ಟೆ ಕಾರ್ಮಿಕ ಇಲಾಖೆ ಕಚೇರಿ ಬಳಿ;ಆಹಾರ;32;22 ನಂದಿಗುಡ್ಡೆ ಅಂಚೆ ಕಚೇರಿ ಬಳಿ;ಆಹಾರ;20;55 ಮನ್ಣಗುಡ್ಡೆ ಗಾಂಧಿ ಪಾರ್ಕ್ ಬಳಿ;ಆಹಾರ;5;28 ಮಣ್ಣಗುಡ್ಡೆ ಸಂಘನಿಕೇತನ ಬಳಿ; ತರಕಾರಿ;1;28 ಸುರತ್ಕಲ್ ಮೂಡ ಮಾರುಕಟ್ಟೆ ಬಳಿಯ ರಸ್ತೆ; ಮಿಶ್ರ ವ್ಯಾಪಾರ;20;7 ಸುರತ್ಕಲ್ ಮೂಡ ‌ಮಾರುಕಟ್ಟೆ ಒಳಗಿನ ಜಾಗ;ಮಿಶ್ರ ವ್ಯಾಪಾರ;–;7 ಕಾಟಿಪಳ್ಳ ಕೈಕಂಬ ಸಂತೆಯ ಜಾಗ;ಮಿಶ್ರ ವ್ಯಾಪಾರ;30;03 ಕಾಟಿಪಳ್ಳ ಗಣೇಶಪುರ ದೇವಸ್ಥಾನದ ಬಳಿ; ಮಿಶ್ರ ವ್ಯಾಪಾರ;20;3 ಬೈಕಂಪಾಡಿ ಎಪಿಎಂಸಿ ಬಳಿ; ಮಿಶ್ರ ವ್ಯಾಪಾರ;56;10
‘ಮಳಿಗೆ ತೀರಾ ಚಿಕ್ಕದು’
‘ಸ್ಟೇಟ್‌ಬ್ಯಾಂಕ್‌ ಬಳಿ ಬೀದಿ ಬದಿ ವ್ಯಾಪಾರ ವಲಯ ನಿರ್ಮಿಸಿರುವ ಪಾಲಿಕೆಯ ನಡೆ ಸ್ವಾಗತಾರ್ಹ. ಆದರೆ ಇಲ್ಲಿ ನಿರ್ಮಿಸಿರುವ ಮಳಿಗೆಗಳ ಗಾತ್ರ ತೀರಾ ಚಿಕ್ಕದು. ನಿಯಮ ಪ್ರಕಾರ 6 ಅಡಿ ಉದ್ದ 4 ಅಡಿ ಅಗಲವಾದರೂ ಇರಬೇಕು. ಇಲ್ಲಿನ ಮಳಿಗೆಗಳು 5 ಅಡಿ ಉದ್ದ 3 ಅಡಿ ಅಗಲ ಇವೆ. ಜೋರು ಮಳೆ ಬಂದರೆ ಇಲ್ಲಿ ವ್ಯಾಪಾರ ನಡೆಸುವುದು ಕಷ್ಟ. ಇಲ್ಲಿ ವಸ್ತುಗಳನ್ನು ಬೆಳಿಗ್ಗೆ ತಂದು ರಾತ್ರಿ ಮರಳಿ ಒಯ್ಯಬೇಕು ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ನಮಗೆ ಸಾಮಗ್ರಿಗಳನ್ನು ಇಡಲು ಗೋದಾಮಿನ ವ್ಯವಸ್ಥೆ ಕಲ್ಪಿಸಿದರೆ ಒಳ್ಳೆಯದು’ ಎಂದು ಬೀದಿ ಬದಿ ವ್ಯಾಪಾರಿಯೊಬ್ಬರು ತಿಳಿಸಿದರು. ‘ಸ್ಟೇಟ್‌ ಬ್ಯಾಂಕ್‌ನಂತಹ ಜನನಿಬಿಡ ಸ್ಥಳದಲ್ಲೇ ಮಳಿಗೆ ನಿರ್ಮಿಸಿದ್ದೇವೆ. ಮಳಿಗೆ ನಿರ್ಮಿಸಲು ದುಬಾರಿ ಮೌಲ್ಯದ ಈ ಜಾಗಕ್ಕಿಂತ ಉತ್ತಮ ಜಾಗ ಸಿಗುವುದೇ. ಮಳಿಗೆಗಳಿಗೆ ನೀರು ವಿದ್ಯುತ್ ಸೇರಿದಂತೆ ಎಲ್ಲ ಸವಲತ್ತು ಕಲ್ಪಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತ ಆನಂದ ಸಿ.ಎಲ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT