ಮಂಗಳವಾರ, ಮಾರ್ಚ್ 28, 2023
30 °C

ಉಪ್ಪಿನಂಗಡಿ: ಕೋವಿಡ್‌ನಿಂದ ದಂಪತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆಲ್ಯಾಡಿ(ಉಪ್ಪಿನಂಗಡಿ): ನೆಲ್ಯಾಡಿ ಸಮೀಪದ ಕೊಕ್ಕಡ ಎಂಬಲ್ಲಿ ಗುರುವಾರ ಪತಿ ಹಾಗೂ ಪತ್ನಿ ಒಂದೇ ದಿನ 5 ತಾಸು ಅವಧಿಯೊಳಗೆ ಮೃತಪಟ್ಟಿದ್ದಾರೆ.

ಕೊಕ್ಕಡ ಗ್ರಾಮದ ಪುನ್ನತ್ತಾನಾತ್ ನಿವಾಸಿ, ಕೃಷಿಕ ವರ್ಗೀಸ್ ಪಿ.ವಿ.(74) ಹಾಗೂ ಅವರ ಪತ್ನಿ ಮೇರಿ ವರ್ಗೀಸ್
ಪಿ.ವಿ.(73) ಮೃತಪಟ್ಟವರು. ಇಬ್ಬರಿಗೂ ಕಳೆದ ತಿಂಗಳು 25ರಂದು ಜ್ವರ ಬಂದಿದ್ದು ಅದಕ್ಕೆ ಔಷಧಿ ಪಡೆದು ಗುಣಮುಖರಾಗಿದ್ದರು. ಆದರೆ ಇಬ್ಬರಿಗೂ ಮತ್ತೆ ಜ್ವರ ಕಾಣಿಸಿಕೊಂಡ ಕಾರಣಕ್ಕಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ವೇಳೆ ಇಬ್ಬರಿಗೂ ಕೋವಿಡ್ ಇರುವುದು ದೃಢಪಟ್ಟಿತ್ತು.

ಅವರಿಗೆ ಬೆಳ್ತಂಗಡಿ ಮುಂಡಾಜೆ ಸೇಂಟ್ ಮೇರಿಸ್ ಚರ್ಚ್‌ ಧರ್ಮಗುರು ವಿನೋಯ್ ಸೆಬಾಸ್ಟಿನ್ ಸೇರಿದಂತೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು