ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಪದ್ಮಲತಾ, ವೇದವಲ್ಲಿ, ಸೌಜನ್ಯಾ ಮತ್ತು ಯಮುನಾ ಸೇರಿದಂತೆ ಹೆಣ್ಣುಮಕ್ಕಳ ಅಸಹಜ ಸಾವಿನ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಬೇಕು ಮತ್ತು ಹೆಣಗಳನ್ನು ಹೂತು ಹಾಕಲಾಗಿದೆ ಎನ್ನಲಾಗುವ ಪ್ರಕರಣದ ನ್ಯಾಯಯುತ ತನಿಖೆ ನಡೆಯಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಮ್ಮೇಳನ ಆಗ್ರಹಿಸಿತು.

ನಗರದಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಈಶ್ವರಿ ಬಳ್ಕುಂಜ ನಿರ್ಣಯ ಮಂಡಿಸಿದರು. ಅಧ್ಯಕ್ಷೆ ಜಯಂತಿ ಬಿ.ಶೆಟ್ಟಿ ಅನುಮೋದಿಸಿದರು. ಸಭಿಕರು ಚಪ್ಪಾಳೆ ತಟ್ಟಿ ನಿರ್ಣಯವನ್ನು ಬೆಂಬಲಿಸಿದರು.

'ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾದ ಹಲವಾರು ಅಪರಿಚಿತ ಹೆಣ್ಣುಮಕ್ಕಳ ಜರ್ಜೆರಿತ ಮೃತದೇಹಗಳನ್ನು ನನ್ನಿಂದ ಬಲವಂತವಾಗಿ ಮಣ್ಣು ಮಾಡಿಸಿದ್ದಾರೆ' ಎಂದು ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದುದಾಗಿ ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ಹೇಳಿದ ನಂತರ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಹೆಣ್ಣುಮಕ್ಕಳ ಅಸಹಜ ಸಾವು, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ' ಎಂದು ನಿರ್ಣಯದಲ್ಲಿ ಹೇಳಲಾಗಿದೆ.

'ಸಾರ್ವಜನಿಕರ ಒತ್ತಡದ ನಂತರ ಧರ್ಮಸ್ಥಳ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಆಗಿದೆ. ಇದರಿಂದ ಜನರಲ್ಲಿ ಆಶಾಭಾವ ಮೂಡಿದೆ. ಆದರೆ ಆಡಳಿತ ಮತ್ತು ವಿರೋಧ ಪಕ್ಷಗಳು ಪ್ರಕರಣದ ಕುರಿತು ವ್ಯಕ್ತಪಡಿಸುತ್ತಿರುವ ನಿಲುವುಗಳನ್ನು ಗಮನಿಸಿದರೆ ನಿಷ್ಪಕ್ಷಪಾತ ತನಿಖೆ ನಡೆಯುವ ಬಗ್ಗೆ ಆತಂಕ ಸಂದೇಹ ಮೂಡಿದೆ' ಎಂಬ ಅಭಿಪ್ರಾಯ ನಿರ್ಣಯದಲ್ಲಿ ವ್ಯಕ್ತವಾಯಿತು.

'ಜನರಲ್ಲಿ ಮೂಡಿರುವ ಆತಂಕಗಳನ್ನು ಗಮನಿಸಿ ಸರ್ಕಾರ ವಿಶೇಷ ತಂಡಕ್ಕೆ ಮುಕ್ತ ಅವಕಾಶ ನೀಡಿ, ನ್ಯಾಯಯುತ ತನಿಖೆ ನಡೆಯುವುದಾಗಿ ಖಾತರಿಪಡಿಸಬೇಕು. ಸಾಕ್ಷಿ ಮತ್ತು ಅವರ ಪರವಾದ ವಕೀಲರಿಗೆ ಗರಿಷ್ಠ ಭದ್ರತೆ ಒದಗಿಸಬೇಕು. ಹೆಣ ಹೂತುಹಾಕಲಾಗಿದೆ ಎಂಬ ಪ್ರಕರಣಕ್ಕೆ ಮಾತ್ರ ತನಿಖೆಯನ್ನು ಸೀಮಿತಗೊಳೊಸದೆ 80ರ ದಶಕದಲ್ಲಿ ಅಪಹರಣಕ್ಕೆ ಒಳಗಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ, ಪತ್ತೆಹಚ್ಚಲಾಗದ ಪ್ರಕರಣ ಎಂದು ಷರಾ ಬರೆದಿರುವ ವಿದ್ಯಾರ್ಥಿನಿ ಪದ್ಮಲತಾ, ಸೌಜನ್ಯಾ ಪ್ರಕರಣ, ಮಾವುತ ನಾರಾಯಣ ಅವರ ಸಹೋದರಿ ಯಮುನಾ ಕೊಲೆ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಬೇಕು' ಎಂದು ನಿರ್ಣಯದಲ್ಲಿ ಆಗ್ರಹಿಸಲಾಯಿತು.
.ಧರ್ಮಸ್ಥಳ ಅಪರಾಧ ಕೃತ್ಯಗಳ ತನಿಖೆ: ನಿಯಮದಲ್ಲಿಲ್ಲ ಹಿಂದೆ ಸರಿಯುವ ಅವಕಾಶ.ಧರ್ಮಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ: ದೂರುದಾರನ ಹೇಳಿಕೆ ದಾಖಲು.ಧರ್ಮಸ್ಥಳ ಅಸಹಜ ಸಾವು ಪ್ರಕರಣ: ಎಸ್ಐಟಿ ಚಟುವಟಿಕೆ ಚುರುಕು .ಧರ್ಮಸ್ಥಳ ಅಸಹಜ ಸಾವು ಪ್ರಕರಣ: ಬೆಳ್ತಂಗಡಿಯಲ್ಲಿ ಕಚೇರಿ ತೆರೆದ ಎಸ್ಐಟಿ.ಧರ್ಮಸ್ಥಳ ಪ್ರಕರಣ | ಸತ್ಯಾಂಶ ಹೊರಬರುವ ವಿಶ್ವಾಸವಿದೆ: ನಾಗಲಕ್ಷ್ಮಿ ಚೌಧರಿ.ಬೆಂಗಳೂರು | ಧರ್ಮಸ್ಥಳ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.