ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಕಬಡ್ಡಿ ಕೋಚ್‌ ಭಾಸ್ಕರನ್‌ಗೆ ದ್ರೋಣಾಚಾರ್ಯ ಪ್ರಶಸ್ತಿ

Published 21 ಡಿಸೆಂಬರ್ 2023, 5:00 IST
Last Updated 21 ಡಿಸೆಂಬರ್ 2023, 5:00 IST
ಅಕ್ಷರ ಗಾತ್ರ

ಮಂಗಳೂರು: ಜೀವಮಾನದ ಸಾಧನೆ ವಿಭಾಗದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಎಡಚೇರಿ ಭಾಸ್ಕರನ್‌ ಅವರಿಗೆ 2023ನೇ ಸಾಲಿನ ದ್ರೋಣಾಚಾರ್ಯ ಪ್ರಶಸ್ತಿ ಒಲಿದಿದೆ.

ಪ್ರೊ ಕಬಡ್ಡಿಯಲ್ಲಿ ಭಾಸ್ಕರನ್‌ ಅವರ ತರಬೇತಿಯಲ್ಲಿ ಆಡಿದ್ದ ಯು–ಮುಂಬಾ ತಂಡ 2015ರಲ್ಲಿ ಪ್ರಶಸ್ತಿ ಗೆದ್ದಿತ್ತು. 2014 ಮತ್ತು 2016ರಲ್ಲಿ ರನ್ನರ್‌ಅಪ್‌ ಆಗಿತ್ತು. 

2014ರಲ್ಲಿ 17ನೇ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮಹಿಳಾ ಕಬಡ್ಡಿ ತಂಡಕ್ಕೂ ಅವರೇ ತರಬೇತುದಾರರಾಗಿದ್ದರು. 2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್ ಗೇಮ್ಸನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಪುರುಷರ ಕಬಡ್ಡಿ ತಂಡಕ್ಕೂ ಕೋಚ್‌ ಆಗಿದ್ದರು. 2009ರಲ್ಲಿ ವಿಯೆಟ್ನಂನಲ್ಲಿ ನಡೆದಿದ್ದ ಮೂರನೇ ಒಳಾಂಗಣ ಏಷ್ಯನ್‌ ಗೇಮ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತೀಯ ಪುರುಷರ ತಂಡದ ತರಬೇತುದಾರರಾಗಿದ್ದರು. 1995ರಿಂದ 2015ರವರೆಗೆ ಇವರು ತರಬೇತಿ ನೀಡಿದ್ದ ಕಬಡ್ಡಿ ತಂಡಗಳು ರಾಷ್ಟ್ರಮಟ್ಟದ ವಿವಿಧ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದಿವೆ.

ಕ್ರೀಡಾ ತರಬೇತಿಯಲ್ಲಿ ಎನ್‌ಐಎಸ್‌ ಪ್ರಮಾಣೀಕೃತ ಡಿಪ್ಲೊಮಾ ಪಡೆದಿರುವ ಭಾಸ್ಕರನ್‌ ಅಮೆಚೂರ್‌ ಕಬ್ಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾ (ಎಕೆಎಫ್‌ಐ) ರೆಫರಿ ಆಗಿದ್ದಾರೆ. ಇಂಟರ್‌ನ್ಯಾಷನಲ್‌ ಕೋಚಸ್‌ ಆ್ಯಂಡ್‌ ರೆಫರೀ ಕೋರ್ಸ್‌ ಡಿಪ್ಲೊಮಾವನ್ನೂ ತೇರ್ಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT