ಪುತ್ತೂರು: ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗನ್ನೂರು ಗ್ರಾಮದ ಕುಕ್ಕಾಜೆ ಎಂಬಲ್ಲಿ ಮನೆ ಕುಸಿದಿದ್ದು, ಈ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ.

ಮನೆಯ ಚಾವಣಿ ಸಂಪೂರ್ಣವಾಗಿ ಕುಸಿದಿರುವುದರಿಂದ ಸೀತಾ ಅವರ ಕುಟುಂಬ ಸಮಸ್ಯೆಗೀಡಾಗಿದೆ. ಮನೆಯ ಮುಂಭಾಗದ ಗೋಡೆಯೂ ಕುಸಿದಿರುವುದರಿಂದ ವಾಸ್ತವ್ಯಕ್ಕೆ ತೊಡಕಾಗಿದೆ. ಕಳೆದ ಬಾರಿಯೂ ಅವರ ಮನೆ ಕುಸಿದಿತ್ತು. ಪ್ರಾಕೃತಿಕ ವಿಕೋಪ ಪಡಿಹಾರವಾಗಿ ಅವರಿಗೆ ಸರ್ಕಾರದಿಂದ ₹ 6 ಸಾವಿರ ಪರಿಹಾರ ಮಂಜೂರಾಗಿತ್ತು.

ಸೀತಾ ಅವರಿಗೆ ಬಡಗನ್ನೂರು ಗ್ರಾಮ ಪಂಚಾಯಿತಿಯಿಂದ ವಸತಿ ಯೋಜನೆಯಡಿ ಆದ್ಯತೆಯಲ್ಲಿ ಮನೆ ಮಂಜೂರು ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಸರ್ಕಾರದಿಂದ ಪ್ರಾಕೃತಿಕ ವಿಕೋಪದಡಿ ₹ 6 ಸಾವಿರ ಪರಿಹಾರ ಬಂದಿದ್ದ ಕಾರಣ ಕಾನೂನು ತೊಡಕು ಎದುರಾಗಿತ್ತು. ಇದರಿಂದ ವಸತಿ ಯೋಜನೆಯಡಿ ಹೊಸ ಮನೆ ಮಂಜೂರು ಮಾಡಲು ಸಾಧ್ಯವಾಗಿರಲಿಲ್ಲ ಎಂಬ ಮಾಹಿತಿ ಲಭಿಸಿದೆ.

ಸೀತಾ ಮತ್ತು ಅವರ 6 ಮಕ್ಕಳನ್ನೊಳಗೊಂಡ ಕುಟುಂಬ ಅತಂತ್ರವಾಗಿದೆ. ಕುಟುಂಬಕ್ಕೆ ಸರ್ಕಾರದಿಂದ ಪೂರ್ಣ ಪ್ರಮಾಣದ ಪರಿಹಾರ ಅಥವಾ ವಸತಿ ಯೋಜನೆಯಡಿ ಮನೆ ನೀಡಬೇಕು ಎಂದು ಎಂದು ಬಡಗನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಆಳ್ವ ಗಿರಿಮನೆ ಅವರು, ಈ ಬಾರಿ ಆದ್ಯತೆಯಲ್ಲಿ ಅವರಿಗೆ ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.