ಶುಕ್ರವಾರ, ಜುಲೈ 30, 2021
22 °C

ತೊಕ್ಕೊಟ್ಟು: ಆಟೋಮೊಬೈಲ್ ಅಂಗಡಿಗೆ ಬೆಂಕಿ, ಲಕ್ಷಾಂತರ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಉಳ್ಳಾಲ (ದಕ್ಷಿಣ ಕನ್ನಡ): ತೊಕ್ಕೊಟ್ಟುವಿನಲ್ಲಿ ಆಟೋಮೊಬೈಲ್ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸಂಭವಿಸಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

ಓವರ್ ಬ್ರಿಡ್ಜ್ ಬಳಿಯಿರುವ ಅಂಗಡಿಯಲ್ಲಿ ಅವಘಢ ಸಂಭವಿಸಿದೆ. ಮುಚ್ಚಿದ್ದ ಅಂಗಡಿಯಲ್ಲಿ ದಟ್ಟವಾಗಿ ಹೊಗೆ ಆವರಿಸಿರುವುದನ್ನು ಕಂಡ ಸ್ಥಳೀಯರು ಶಟರ್ ತೆರೆದು ನೋಡಿದಾಗ ಬೆಂಕಿ ತಗಲಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಸೇರಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ಬೆಂಕಿ ಅಂಗಡಿಗೆ ಸಂಪೂರ್ಣ ವ್ಯಾಪಿಸಿ ಲಕ್ಷಾಂತರ ನಷ್ಟ ಸಂಭವಿಸಿದೆ. ಅಗ್ನಿ ಶಾಮಕ ದಳ  ಸ್ಥಳಕ್ಕಾಗಮಿಸಿದ್ದು, ಉಳ್ಳಾಲ ಪೊಲೀಸರು ಸ್ಥಳದಲ್ಲಿ ಜಮಾಯಿಸಿರುವ ಮಂದಿಯನ್ನು ಚದುರಿಸುತ್ತಿದ್ದಾರೆ. ಭರತ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು