ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನದ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನರಸಿಂಹ ಜಯಂತಿ ಉತ್ಸವದ ಪ್ರಯುಕ್ತ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ದೇವರ ಪಾಲಕಿ, ಬಂಡಿ ಉತ್ಸವ ಹಾಗೂ ರಥಬೀದಿಯಲ್ಲಿ ವಿಮಾನೋತ್ಸವ ನಡೆಯಿತು.

ರಾತ್ರಿ ಮಹಾಪೂಜೆಯ ಬಳಿಕ ದೇವರ ಹೊರಾಂಗಣ ಉತ್ಸವಗಳು ಆರಂಭವಾದವು. ಆರಂಭದಲ್ಲಿ ಬಂಡಿ ಉತ್ಸವ ಮತ್ತು ವಸಂತಪೂಜೆ ನಡೆಯಿತು. ನಂತರ ಮಂತ್ರಘೋಷ, ನಾಮಸಂಕೀರ್ತನೆ, ಭಜನೆ, ನಾದಸ್ವರ, ಸ್ಯಾಕ್ಸೊಫೋನ್, ಚೆಂಡೆ ಸುತ್ತುಗಳು ನೆರವೇರಿದವು.

ಕಾಶಿಕಟ್ಟೆಯಲ್ಲಿ ದೇವರಿಗೆ ಪೂಜೆ ನಡೆಯಿತು. ಮಠದಲ್ಲಿ ದೇವರಿಗೆ ಮಂಟಪೋತ್ಸವವನ್ನು ಸ್ವಾಮೀಜಿ ನೆರವೇರಿಸಿದರು. ಅರ್ಚಕ ಶ್ರೀಕರ ಉಪಾಧ್ಯಾಯರು ಉತ್ಸವದ ವಿಧಿಗಳನ್ನು ನೆರವೇರಿಸಿದರು. ಮಠದ ದಿವಾನ ಸುದರ್ಶನ ಜೋಯಿಸ, ಮಠದ ಪುರೋಹಿತರು, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.