ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟ-ಕರಂಗಲ್ಲು ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಅದರ ಕಾಮಗಾರಿ ಕಳಪೆ ಎಂಬ ಆರೋಪ ವ್ಯಕ್ತವಾಗಿದೆ. ಊರವರ ಎಚ್ಚರಿಕೆಯ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮರು ದುರಸ್ತಿ ಮಾಡಿ ಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

₹ 5.45ಕೋಟಿ ಅನುದಾನದಲ್ಲಿ ಕಟ್ಟ-ಕರಂಗಲ್ಲು ರಸ್ತೆ ಕಾಂಕ್ರಿಟೀಕರಣ ಮಾಡಲಾಗಿತ್ತು. ಇದರಲ್ಲಿ ಒಂದು ಸೇತುವೆ ಹಾಗೂ ಎರಡು ಮೊರಿಗಳೂ ಸೇರಿದ್ದವು. ರಸ್ತೆ ಅಭಿವೃದ್ದಿ ಪೂರ್ತಿಗೊಂಡ ಎರಡು ತಿಂಗಳಲ್ಲಿ ರಸ್ತೆಯ ಜಲ್ಲಿ ಎದ್ದು ಹೋಗಲು ಆರಂಭಗೊಂಡಿತ್ತು. ರಸ್ತೆ ಹದಗೆಟ್ಟ ಬಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದರು. ಅದರಂತೆ ಎಂಜಿನಿಯರ್‌ಗಳಾದ ವೇಣುಗೋಪಾಲ, ಪ್ರಭಾಕರ, ಪರಮೇಶ್ವರ್ ಅವರು ಪರಿಶೀಲನೆ ನಡೆಸಿದ್ದರು.

ಪರಿಶೀಲನೆ ವೇಳೆ ಕಳಪೆ ಕಾಮಗಾರಿ ಕಂಡು ಬಂದ ಕಾರಣ ಗುತ್ತಿಗೆದಾರರು ರಸ್ತೆಯನ್ನು ಮರು ನಿರ್ಮಿಸಿಕೊಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಉದಯ ಶಿವಾಲ, ರಾಕೇಶ್ ಮುಳ್ಳುಬಾಗಿಲು, ಗಿರೀಶ್ ಹೇರ್ಕಜೆ, ನವೀನ್ ಕೊಪ್ಪಡ್ಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.