ಮಂಗಳೂರು: ಸಾಲು ಅಂಗಡಿಗಳು, ಆಸ್ಪತ್ರೆ, ಒತ್ತಟ್ಟಿಗೆ ಮನೆಗಳು, ವಸತಿ ಸಮುಚ್ಚಯಗಳನ್ನು ಹೊಂದಿರುವ, ಸದಾ ಜನದಟ್ಟಣೆ ಇರುವ ವಾರ್ಡ್ ಕದ್ರಿ. ಅಲ್ಲಲ್ಲಿ ಸೃಷ್ಟಿಯಾಗಿರುವ ಬ್ಲ್ಯಾಕ್ ಸ್ಪಾಟ್ಗಳು, ವಾಹನ ಪಾರ್ಕಿಂಗ್ ಕಿರಿಕಿರಿಗೆ ಈ ವಾರ್ಡ್ನ ಜನರು ಬೇಸತ್ತಿದ್ದಾರೆ.

ತೀರಾ ವಿಳಂಬದ ನಂತರ ಸಿದ್ಧವಾಗಿರುವ ಕದ್ರಿ ಮಾರುಕಟ್ಟೆಗೆ ಅಂಗಡಿಗಳು ಸ್ಥಳಾಂತರಗೊಂಡಿವೆ. ತಳ ಅಂತಸ್ತಿನ 38 ಮಳಿಗೆಗಳು ಇವೆ. ಹೊಸ ಕಟ್ಟಡ ನಿರ್ಮಾಣದ ಪೂರ್ವ ಇರುವವರು ಆದ್ಯತೆಯಲ್ಲಿ ಅಂಗಡಿ ಪಡೆದುಕೊಂಡಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಿದ್ದ ಹಳೆ ಮಾರ್ಕೆಟ್ನ ಎಲ್ಲ ಮಳಿಗೆಗಳು ಶಟರ್ ಎಳೆದುಕೊಂಡಿವೆ. ಇಲ್ಲಿನ ಶೌಚಾಲಯ ಗಬ್ಬು ನಾರುತ್ತಿದೆ. ಜೋರು ಮಳೆ ಸುರಿದರೆ, ಇಡೀ ಪ್ರದೇಶ ಕೊಂಪೆಯಾಗುತ್ತದೆ.

‘ಹಳೆ ಕಟ್ಟಡವನ್ನು ತೆರವುಗೊಳಿಸಿ, ಈ ಜಾಗವನ್ನು ಬಸ್ ತಂಗುದಾಣವಾಗಿ ರೂಪಿಸಬೇಕು. ಲಯನ್ಸ್ ಭವನದ ಎದುರು ಹೊರತುಪಡಿಸಿದರೆ, ಕದ್ರಿ ಭಾಗದಲ್ಲಿ ಮತ್ತೆಲ್ಲಿಯೂ ಬಸ್ ತಂಗುದಾಣ ಇಲ್ಲ. ಬಸ್ಗೆ ಕಾಯುವವರು ರಸ್ತೆ ಬದಿಯಲ್ಲಿ ನಿಲ್ಲಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಬಹುಹೊತ್ತು ನಿಂತು ಕಾಯುವುದು ಕಷ್ಟ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್ಸ್.

‘ಸಾರ್ವಜನಿಕರು ಕಟ್ಟಡ ನಿರ್ಮಿಸುವಾಗ ಸೆಟ್ಬ್ಯಾಕ್ ಬಿಡಲು ಪಾಲಿಕೆ ನಿರ್ದೇಶನ ನೀಡುತ್ತದೆ. ಸರ್ಕಾರಿ ಕಚೇರಿಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲವೇ? ಮೆಸ್ಕಾಂ ಕಚೇರಿಯ ಕಾಂಪೌಂಡ್ ರಸ್ತೆಗೆ ತಾಗಿಕೊಂಡೇ ಇದೆ. ಅದರ ಪಕ್ಕದಲ್ಲಿ ವಾಹನಗಳು ನಿಂತಿರುತ್ತವೆ. ಇದರಿಂದ ರಸ್ತೆ ಕಿರಿದಾಗಿ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ’ ಎಂದು ಸ್ಥಳೀಯ ಅಂಗಡಿಕಾರರೊಬ್ಬರು ಹೇಳಿದರು.

‘ಕದ್ರಿ ದೇವಸ್ಥಾನಕ್ಕೆ ಬೇರೆ ಬೇರೆ ಭಾಗಗಳಿಂದ ಭಕ್ತರು ಬರುತ್ತಾರೆ. ದೇವಸ್ಥಾನಕ್ಕೆ ತೆರಳುವ ಮಾರ್ಗಸೂಚಿ ಫಲಕ ಇಲ್ಲ. ಹೀಗಾಗಿ, ಪ್ರವಾಸಿಗರು ರಸ್ತೆ ಬದಿ ನಿಂತು ಅಂಗಡಿಕಾರರನ್ನು ವಿಚಾರಿಸುತ್ತಾರೆ. ಇಎಸ್ಐ ಆಸ್ಪತ್ರೆಯೂ ಇದೇ ಭಾಗದಲ್ಲಿದ್ದು, ಹೊರಗಿನಿಂದ ಬರುವವರಿಗೆ ಆಸ್ಪತ್ರೆಗೆ ತೆರಳುವ ಮಾರ್ಗ ತಿಳಿಸುವುದು ನಿತ್ಯ ನಮಗೆ ಹೆಚ್ಚುವರಿ ಕೆಲಸ’ ಎಂದು ಅವರು ಬೇಸರಿಸಿದರು.

‘ಬ್ಲ್ಯಾಕ್ ಸ್ಪಾಟ್ಗಳು ಕದ್ರಿ ವಾರ್ಡ್ನ ಸೌಂದರ್ಯವನ್ನು ಹಾಳುಗೆಡವಿವೆ. ಎಲ್ಲೆಂದರಲ್ಲಿ ಕಸದ ಮೂಟೆಗಳು ರಾಶಿ ಬಿದ್ದಿರುತ್ತವೆ. ವಾರ್ಡ್ ಸಮಿತಿ ರಚನೆಯಾದರೂ, ಸಭೆಗಳು ನಡೆದಿಲ್ಲ. ವಾರ್ಡ್ ಸಮಿತಿ ಸಭೆ ನಿಯಮಿತವಾಗಿ ನಡೆದಿದ್ದರೆ, ಸಮಸ್ಯೆಗಳಿಗೆ ಪರಿಹಾರ ನಿರೀಕ್ಷಿಸಬಹುದಿತ್ತು’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

‘ಮಲ್ಲಿಕಟ್ಟೆ ಗ್ರಂಥಾಲಯದ ಸಮೀಪ ಈಗ ಮಳೆಗಾಲದಲ್ಲಿ ಮತ್ತೆ ಅಗೆದು ಹಾಕಿದ್ದಾರೆ. ಕೆಲವು ಭಾಗಗಳಲ್ಲಿ ಯಾವಾಗ ನೋಡಿದರೂ ರಸ್ತೆ ಅಗೆದು ಹಾಕುತ್ತಾರೆ. ಪೈಪ್ಲೈನ್ ಅಥವಾ ಯಾವುದೇ ಕಾಮಗಾರಿ ಇದ್ದರೆ ಒಮ್ಮೆಲೇ ಕೈಗೊಳ್ಳಲು ಸಾಧ್ಯವಿಲ್ಲವೇ? ರಸ್ತೆ ನಿರ್ಮಿಸುವುದು ಪುನಃ ಅಗೆಯುವುದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತದೆ. ಏಕಕಾಲದಲ್ಲಿ ಎಲ್ಲ ಕಾಮಗಾರಿ ನಡೆಸಿ, ರಸ್ತೆ ಅಗೆತವನ್ನು ನಿಲ್ಲಿಸಿ ಎಂಬುದನ್ನು ಸ್ಥಳೀಯರ ಪರವಾಗಿ ಆಗ್ರಹಿಸುತ್ತೇನೆ’ ಎಂದು ಅವರು ಹೇಳಿದರು.

ನಾವು ಪಾಲಿಕೆಗೆ ತೆರಿಗೆ ಕಟ್ಟುವುದು ಮಾತ್ರ ಶಿವಬಾಗ್ ಸುತ್ತಮುತ್ತ ಮನೆ–ಮನೆ ಕಸ ಸಂಗ್ರಹಕ್ಕೆ ಬರುವುದಿಲ್ಲ.ಕಸವನ್ನು ನಾವೇ ರಸ್ತೆ ಬದಿ ತಂದಿಡಬೇಕು.
-ವಿನ್ಸೆಂಟ್ ಡಿಸೋಜ, ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.