ಗುರುವಾರ , ಡಿಸೆಂಬರ್ 8, 2022
18 °C
ಎಸ್‌ಡಿಎಂ: ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ

ಪತ್ರಕರ್ತರಿಗೆ ಸಾಮಾನ್ಯ ಜ್ಞಾನ ಅಗತ್ಯ: ರವೀಂದ್ರ ಭಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಪತ್ರಕರ್ತರಿಗೆ ಕನ್ನಡದಲ್ಲಿ ಭಾಷಾ ಪ್ರಭುತ್ವ, ಭಾಷಾಂತರ ಕಲೆ ಮತ್ತು ಸಾಮಾನ್ಯ ಜ್ಞಾನ ಅಗತ್ಯ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.

ಇಲ್ಲಿನ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅವರು ಬುಧವಾರ ಉಪನ್ಯಾಸ ನೀಡಿದರು. 

ಪತ್ರಕರ್ತರಿಗೆ ಕಾನೂನಿನ ಅರಿವು ಇದ್ದು, ಸಾಹಿತ್ಯದ ಅಧ್ಯಯನವನ್ನೂ ಮಾಡಬೇಕು. ವಸ್ತುನಿಷ್ಠವಾದ ವರದಿಯನ್ನು ಸರಳ ಶೈಲಿಯಲ್ಲಿ ಬರೆಯಬೇಕು. ಇಂದು ವಾಟ್ಸ್‌ಆ್ಯಪ್‌,  ಆನ್‌ಲೈನ್ ಬರವಣಿಗೆ, ಆಡಿಯೊ– ವಿಡಿಯೊ, ಮೊಬೈಲ್ ಮೊದಲಾದ ಮಾಧ್ಯಮಗಳಿಂದ ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾದರೂ ಆತಂಕ ಪಡಬೇಕಾಗಿಲ್ಲ. ಪ್ರತಿಯೊಂದು ಪತ್ರಿಕೆಗೂ ತನ್ನದೇ ಆದ ಧೋರಣೆಗಳಿದ್ದು, ಪ್ರಜಾವಾಣಿ 74 ವಷಗಳಿಂದ ಓದುಗರ ವಿಶ್ವಸಾರ್ಹ ಪತ್ರಿಕೆಯಾಗಿ ಬೆಳೆಯುತ್ತಿದೆ, ಬೆಳಗುತ್ತಿದೆ ಎಂದು ಹೇಳಿದರು.

ಸಂಯಮದಿಂದ ಪತ್ರಿಕೆಗಳನ್ನು ಓದುವುದರಿಂದ ಆಲೋಚನಾ ಶಕ್ತಿ ಹಾಗೂ ವೈಚಾರಿಕತೆ ಬೆಳೆಯುತ್ತದೆ. ಪತ್ರಕರ್ತರು ಸದಾ ಅಧ್ಯಯನಶೀಲರಾಗಬೇಕು ಎಂದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಸ್ವಾಗತಿಸಿದರು. ಸಂಜಯ್ ವಂದಿಸಿದರು. ರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು