ಬುದ್ಧಿಮಾತು ಹೇಳಿದ್ದಕ್ಕೆ ಸಿಟ್ಟುಗೊಂಡು ಟಿಪ್ಪರ್ ಹರಿಸಿದ ಚಾಲಕ: ವ್ಯಕ್ತಿ ಸಾವು

ಮೂಡುಬಿದಿರೆ: ‘ನಿಧಾನವಾಗಿ ವಾಹನ ಚಲಾಯಿಸು’ ಎಂದು ಬುದ್ಧಿಮಾತು ಹೇಳಿದಕ್ಕೆ ಸಿಟ್ಟುಗೊಂಡ ಟಿಪ್ಪರ್ ಚಾಲಕ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಬಳಿಕ ರಸ್ತೆಗೆ ಬಿದ್ದ ಆತನ ಕಾಲಿನ ಮೇಲೆ ಟಿಪ್ಪರ್ ಚಲಾಯಿಸಿದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇಬ್ಬರು ಕೋಟೆಬಾಗಿಲು ನಿವಾಸಿಗಳು. ಶುಕ್ರವಾರ ಮಧ್ಯಾಹ್ನ ಸ್ಥಳೀಯ ಮಸೀದಿಗೆ ಹೋಗಿದ್ದರು. ಆರೋಪಿ ನಮಾಜ್ ಮುಗಿಸಿ ಟಿಪ್ಪರ್‌ನಲ್ಲಿ ಹೊರಡುವಾಗ ಹತ್ತಿರದಲ್ಲಿ ಬರುತ್ತಿದ್ದ ವ್ಯಕ್ತಿ ಟಿಪ್ಪರ್ ಅನ್ನು ನಿಧಾನವಾಗಿ ಚಲಾಯಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.
ಇದರಿಂದ ಚಾಲಕ ಸಿಡಿಮಿಡಿಗೊಂಡು ಮಾತಿಗಿಳಿದಿದ್ದಾನೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಚಾಲಕ ಹಲ್ಲೆ ನಡೆಸಿದ್ದಾನೆ. ನೆಲಕ್ಕೆ ಬಿದ್ದ ವ್ಯಕ್ತಿಯ ಮೇಲೆ ಟಿಪ್ಪರ್ ಚಲಾಯಿಸಿ ಪ್ರಕರಣ ಸಾವಿನಲ್ಲಿ ಅಂತ್ಯಗೊಂಡಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.