ಗುರುವಾರ , ಏಪ್ರಿಲ್ 22, 2021
29 °C

ಪುತ್ತೂರಿನಲ್ಲಿ ಹರಿದಾಡುತ್ತಿರುವ ಯುವತಿಯ ಅರೆನಗ್ನ ವಿಡಿಯೊ ಬೆನ್ನತ್ತಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಹುಡುಗಿಯೊಬ್ಬಳು ತನ್ನ ಮೈಮೇಲಿನ ವಸ್ತ್ರಗಳನ್ನು ತೆಗೆದು ತನ್ನ ಅರೆಬೆತ್ತಲೆ ಶರೀರವನ್ನು ಪ್ರದರ್ಶಿಸುತ್ತಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಘಟನೆ ಪುತ್ತೂರಿನಲ್ಲಿ ನಡೆದಿದ್ದು,

ಈ ಸಂಬಂಧ ಪುತ್ತೂರು ನಗರ ಠಾಣಾ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹುಡುಗಿಯು ಮೊಬೈಲ್ ಮುಖಾಂತರ ಯಾರಿಗೋ ವಿಡಿಯೊ ಕಾಲ್ ಮಾಡಿದ್ದು, ಈ ಸಮಯ ತನ್ನ ದೇಹದ ವಸ್ತ್ರಗಳನ್ನು ತೆಗೆದು ಅರೆ ಬೆತ್ತಲೆ ಶರೀರವನ್ನು ಫೋನ್ ಸಂಪರ್ಕದಲ್ಲಿರುವ ವ್ಯಕ್ತಿಗೆ ಪ್ರದರ್ಶಿಸುತ್ತಿರುವ ದೃಶ್ಯಾವಳಿ ವಿಡಿಯೊದಲ್ಲಿ ದಾಖಲಾಗಿದೆ.

‘ಈ ವಿಡಿಯೊ ಜನರ ಮೊಬೈಲ್‍ಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರವಾಗಿದ್ದು, ಇದರಿಂದ ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ಉಂಟಾಗಿದೆ. ಮಹಿಳೆಯರ ಗೌರವಕ್ಕೆ ಚ್ಯುತಿ ಉಂಟಾಗಿದೆ’ ಎಂದು ಆಪಾದಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಡಿಯೊ ಬಗ್ಗೆ ಮತ್ತು ಅದನ್ನು ಪ್ರಸಾರ ಮಾಡಿದ ಆರೋಪಿಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು