ಮಂಗಳೂರು: ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಶನಿವಾರ ನಸುಕಿನಲ್ಲಿ ಉತ್ತಮ ಮಳೆಯಾಗಿದೆ.

ಇಳೆ ತಂಪಾಗಿದ್ದು, ಎಲ್ಲೆಡೆ ಮೋಡ ಮುಸುಕಿದ ವಾತಾವರಣ ಇದೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಮೂಲ್ಕಿ ಮತ್ತು ಬಾಳದಲ್ಲಿ 11 ಸೆಂ.ಮೀಟರ್, ಬೆಳ್ತಂಗಡಿ, ಹೊಸಂಗಡಿಯಲ್ಲಿ 10, ಬಳ್ಕುಂಚೆ 9, ಪುತ್ತಿಗೆ 8, ಕಿನ್ನಿಗೋಳಿ, ಪಲ್ಲಡ್ಕ 7, ಐಕಳ, ಗುರುಪುರ6, ಪಟ್ರಮೆ ಮತ್ತು ಬಜಪೆಯಲ್ಲಿ 5 ಸೆಂ.ಮೀಟರ್ ಮಳೆಯಾಗಿದೆ. ಇನ್ನೂ ಎರಡು ದಿನ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಟ್ವಾಳ ವರದಿ: ತಾಲ್ಲೂಕಿನ ಕೆಲವೆಡೆ ಶನಿವಾರ ನಸುಕಿನಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಸೋರ್ಣಾಡು, ರಾಯಿ, ಸಿದ್ಧಕಟ್ಟೆ, ವಾಮದಪದವು, ಕಾಡಬೆಟ್ಟು, ವಗ್ಗ ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. ಹಲವೆಡೆ ಅಡಿಕೆ ಮತ್ತು ರಬ್ಬರ್ ಮರಗಳು ಮುರಿದು ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.