-ಕಾನೂನಿನ ಕಟ್ಟುನಿಟ್ಟು ಅನುಷ್ಠಾನ ಮಾತ್ರದಿಂದ ಜಿಲ್ಲೆಯಲ್ಲಿ ಶಾಂತಿ ನೆಲೆಸಿದ್ದಲ್ಲ ನಾವು ಸಹಕಾರ ಕೊಟ್ಡಿದ್ದರಿಂದ ಜಿಲ್ಲೆ ಶಾಂತವಾಗಿದೆ.. ಜನರ ಅಪೇಕ್ಷೆಯೂ ಇದೇ
-ಶರಣ್ ಪಂಪ್‌ವೆಲ್ ವಿಎಚ್‌ಪಿ ದಕ್ಷಿನ ಪ್ರಾಂತ ಸಹ ಕಾರ್ಯದರ್ಶಿ
ಶಬ್ದ ಮಾಲಿನ್ಯ ವಿಚಾರದಲ್ಲಿ ನಾವೆಲ್ಲ ಆಲೋಚನೆ ಮಾಡಬೇಕು. ಮೆರವಣಿಗೆಯಿಂದ ಬೇರೆಯವರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಕಾನೂನು ಧಾರ್ಮಿಕ ಚೌಕಟ್ಟು ಮತ್ತು ಸಂಸ್ಜೃತಿಗಳೆಲ್ಲವೂ ಅಗತ್ಯ
-ಆಶಾ ಜ್ಯೋತಿ ರೈ ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ
ಕಟೀಲು ಮೇಳದ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಯಾದಾಗ ಯಾರೂ ನೆರವಿಗೆ ಬರಲಿಲ್ಲ. ಕೋವಿಡ್ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಬೀಗ ಹಾಕಿ ಬಾರ್ ತೆರೆದಿಟ್ಟಾಗ ಯಾರೂ ಮಾತನಾಡಲಿಲ್ಲ. ಈಗಲಾದರೂ ಒಗ್ಗಟ್ಟಾಗಿದ್ದು ಒಳ್ಳೆಯದು
-ಹರಿನಾರಾಯಣದಾಸ ಆಸ್ರಣ್ಣ ಕಟೀಲು ದೇವಸ್ಥಾನದ ಆನುವಂಶಿಕ ಅರ್ಚಕ
ಶಾಸಕ ಸ್ಥಾನವನ್ನು ಬೇಕಾದರೂ ಬಿಡುತ್ತೇವೆ ಆದರೆ ನಂಬಿಕೆಯನ್ನು ಬಿಟ್ಟುಕೊಡುವುದಿಲ್ಲ. ಜಿಲ್ಲೆಯ ಸಂಪ್ರದಾಯ ಕಲೆ ಉಳಿಸಲು ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಕಲಾವಿದರನ್ನು ಒಟ್ಟುಸೇರಿಸಿ ಜೊತೆ ಸಭೆ ನಡೆಸುತ್ತೇವೆ.