ಎಸ್‌ಸಿಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಉಪತಹಶೀಲ್ದಾರ್ ಆರ್. ಚೌಧರಿ ಸಹಾಯಕ ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಅಡಿಗ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ
ನದಿತೀರಕ್ಕೆ ಮಣ್ಣು ಸುರಿದರು...
ಮಂಗಳೂರು ನಗರದ ಬೋಳೂರಿನ ಪರಪ್ಪು ಎಂಬಲ್ಲಿ ಫಲ್ಗುಣಿ ನದಿ ಸಮೀಪ ಪರಿಶಿಷ್ಟರಿಗೆ ಸೇರಿದ ಜಾಗಕ್ಕೆ ಕೆಲವರು ಮಣ್ಣು ಸುರಿದು ಅತಿಕ್ರಮಣಕ್ಕೆ ಪ್ರಯತ್ನಿಸಿದ್ದಾರೆ. ಈ ಕುರಿತು ನೀಡಿದ ದೂರಿಗೆ ಸಂಬಂಧಿಸಿ ಬರ್ಕೆ ಪೊಲೀಸ್ ಠಾಣೆಯಿಂದ ಮತ್ತು ಸಿಆರ್‌ಝಡ್ ವತಿಯಿಂದ ಪರಿಶೀಲನೆ ನಡೆದು ವರದಿ ಸಲ್ಲಿಸಲಾಗಿದೆ. ಆದರೆ ಇನ್ನೂ ಸರ್ವೆ ಕಾರ್ಯ ನಡೆಯಲಿಲ್ಲ ಅಲ್ಲಿನ ಮಣ್ಣನ್ನು ತೆರವುಗೊಳಿಸಿಯೂ ಇಲ್ಲ. ವರದಿ ಸಲ್ಲಿಸಿದ್ದರೂ ಕ್ರಮಕ್ಕೆ ಇಷ್ಟು ತಡ ಯಾಕೆ ಎಂದು ಮುಖಂಡರು ಪ್ರಶ್ನಿಸಿದರು.