ಬಂಟ್ವಾಳ: ಇಲ್ಲಿನ ಸೋರ್ಣಾಡು ಸಮೀಪ ಅರಳ ಗ್ರಾಮದ ಅರ್ಬ ನಿವಾಸಿ ಐವನ್ ಪಿಂಟೊ ಎಂಬುವರ ಜಮೀನಿನಲ್ಲಿ ಹಾದು ಹೋಗಿರುವ ಮಂಗಳೂರು–ಬೆಂಗಳೂರು ನಡುವಿನ ತೈಲ ಸರಬರಾಜು ಸಂಸ್ಥೆಗೆ ಸೇರಿದ ಡೀಸೆಲ್ ಪೂರೈಸುವ ಪೈಪ್ ಲೈನ್ ಗೆ ಕನ್ನ ಕೊರೆದು ಡೀಸೆಲ್ ಕಳವು ಮಾಡುವ ದಂಧೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಆರು ಆರೋಪಿಗಳನ್ನು ಮಂಗಳವಾರ ವಶಕ್ಕೆಪಡೆದಿದ್ದಾರೆ.

ಇವರಿಂದ ಲಕ್ಷಾಂತರ ಮೌಲ್ಯದ ಡೀಸೆಲ್ ಕ್ಯಾನ್ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್‌ಐ ಪ್ರಸನ್ನ ಎಂ. ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಎನ್ನಲಾದ ಐವನ್ ಪಿಂಟೊ ಸಹಿತ ಹಲವರನ್ನು ವಶಕ್ಕೆ ಪಡೆದಿದ್ದಾರೆ. ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಹಲವಾರು ಮಂದಿ ತಲೆಮರೆಸಿ ಕೊಂಡಿರುವುದಾಗಿ
ಪೊಲೀಸ್ ಮೂಲಗಳುತಿಳಿಸಿವೆ.

ಜುಲೈ 30ರಂದು ರಾತ್ರಿ ಸುಮಾರು 8 ಗಂಟೆಗೆ 15 ಅಡಿ ಆಳಕ್ಕೆ ಹಿಟಾಚಿ ಮೂಲಕ ಅಗೆದು ನೋಡಿದಾಗ ಪೈಪ್ ಲೈನ್ ಗೆ ಅಕ್ರಮವಾಗಿ ಕನ್ನ ಕೊರೆದುಗೇಟ್ ವಾಲ್ ಮತ್ತು ಸ್ಟೀಲ್ ಕೋಟೆಡ್ ಪೈಪ್ ಅಳವಡಿಸಿಐವನ್ ಪಿಂಟೊ ಅವರಅಡಿಕೆ ತೋಟದ ಬಳಿ
ಗೇಟ್‌ವಾಲ್ ಅಳವಡಿಸಿರುವುದು ಪತ್ತೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.