ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ಕೇಂದ್ರ ಗ್ರಂಥಾಲಯವು ಇಬಿಎಸ್ಸಿಒ ಎಂಜಿನಿಯರಿಂಗ್ ಸೂಟ್ ಹಾಗೂ ಐಇಇಇ ಎಕ್ಸ್ಪ್ಲೋರ್, ಎಎಂಎ ಮೈಕ್ರೊಕೋರ್ಸ್ ಕುರಿತು ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.

ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರನ್ನು ಕೇಂದ್ರೀಕರಿಸಿ ನಡೆದ ಕಾರ್ಯಾಗಾರದಲ್ಲಿ ಸಂಶೋಧನಾ ಕೌಶಲ ಮತ್ತು ವೃತ್ತಿಪರತೆ ಹೆಚ್ಚಿಸುವ ಬಗ್ಗೆ ಬೆಳಕು ಚೆಲ್ಲಲಾಯಿತು. 150ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಇಬಿಎಸ್ಸಿಒ– ಐಇಇಇ ದಕ್ಷಿಣ ಭಾರತದ ತರಬೇತಿ ವ್ಯವಸ್ಥಾಪಕ ಎಂ.ಎಸ್. ಶ್ರೀನಿವಾಸ ಅಧಿವೇಶನದ ನೇತೃತ್ವ ವಹಿಸಿದ್ದರು. ಪ್ರಾಂಶುಪಾಲ ಎಸ್.ಎಸ್. ಇಂಜಗನೇರಿ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಪಾಲಕಿ ಭಾರತಿ ಕೆ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಸುಧೀರ್ ಶೆಟ್ಟಿ, ಶೈಕ್ಷಣಿಕ ವಿಭಾಗದ ಡೀನ್ ಶಮಂತ್ ರೈ ಮಾಹಿತಿ ಒದಗಿಸಿದರು. ಸಹಾಯಕ ಗ್ರಂಥಪಾಲಕಿ ಶ್ವೇತಾ ಕುಮಾರಿ ವಂದಿಸಿದರು. ಸ್ಮಿತಾ ಶೆಣೈ ನಿರೂಪಿಸಿದರು. ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.