ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಥ್ರೋಬಾಲ್ ಟೂರ್ನಿ ಡಿ.10ಕ್ಕೆ

Published 25 ನವೆಂಬರ್ 2023, 6:25 IST
Last Updated 25 ನವೆಂಬರ್ 2023, 6:25 IST
ಅಕ್ಷರ ಗಾತ್ರ

ಮಂಗಳೂರು: ಕಥೋಲಿಕ್‌ ಸಭಾ ಮಂಗಳೂರು, ಆಂಜೆಲೊರ್‌ (ಕಪಿತಾನಿಯಾ) ಘಟಕ ಮತ್ತು ಅಂತರ ಧರ್ಮೀಯ ಸಂವಾದ ಆಯೋಗ ಆಂಜೆಲೊರ್‌ ಚರ್ಚ್‌ ಆಶ್ರಯದಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಥ್ರೋಬಾಲ್ ಟೂರ್ನಿಯನ್ನು ಡಿ.10ರಂದು ಕಪಿತಾನಿಯಾ ಶಾಲೆ ಮೈದಾನದಲ್ಲಿ ಆಯೋಜಿಸಲಾಗಿದೆ.

ಮಂಗಳೂರು ಧರ್ಮಪ್ರಾಂತ್ಯದ ಅಂತರ್ ಧರ್ಮೀಯ ಆಯೋಗದ ಸಂಚಾಲಕ ರಾಯ್‌ ಕ್ಯಾಸ್ಟಲಿನೊ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 30 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಸೌಹಾರ್ದ ಮೂಡಿಸುವ ಉದ್ದೇಶದಿಂದ ಟೂರ್ನಿ ಹಮ್ಮಿಕೊಳ್ಳಲಾಗಿದೆ. ಪ್ರತಿ ತಂಡದಲ್ಲಿ ನಾಲ್ವರು ಆಟಗಾರರು ಕ್ರೈಸ್ತರಿರಬೇಕು ಎಂದು ತಿಳಿಸಲಾಗಿದೆ. ವಯಸ್ಸಿನ ಮಿತಿ ಇಲ್ಲ. ಈ ಟೂರ್ನಿಯು ಸಿಟಿ ಮತ್ತು ಎಪಿಸ್ಕೋಪಲ್‌ ಸಿಟಿ ಕ್ಷೇತ್ರಗಳ ಚರ್ಚ್‌ಗಳಿಗೆ ಸೀಮಿತವಾಗಿದ್ದು, ಒಂದು ಚರ್ಚ್‌ನಿಂದ ಒಂದಕ್ಕಿಂತ ಹೆಚ್ಚು ಪಂಗಡ ಭಾಗವಹಿಸಬಹುದು ಎಂದರು.

ಸಂಚಾಲಕ ಫೆಲಿಕ್ಸ್‌ ಮೊರಾಸ್‌, ಆಂಜೆಲೊರ್‌ ಚರ್ಚ್‌ ಧರ್ಮಗುರು ಫಾದರ್ ವಿಲಿಯಮ್‌ ಮಿನೇಜಸ್‌, ಪ್ರಮುಖರಾದ ರೋಶನ್‌ ಪತ್ರಾವೊ, ರಾಜೇಶ್‌ ಮಿಸ್ಕಿತ್‌, ಲೋಲಿನಾ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT