ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ವಿಕಿಪೀಡಿಯ ಐದನೇ ವರ್ಷಕ್ಕೆ ಪದಾರ್ಪಣೆ

ಆಗಸ್ಟ್ 6ರಂದು ಕಾರ್ಯಕ್ರಮ
Last Updated 4 ಆಗಸ್ಟ್ 2020, 12:39 IST
ಅಕ್ಷರ ಗಾತ್ರ

ಮಂಗಳೂರು: ಭಾರತದ 23ನೇ ಪ್ರಾದೇಶಿಕ ಭಾಷೆಯಾಗಿ ವಿಕಿಪೀಡಿಯ ಬಳಗಕ್ಕೆ ಸೇರಿಕೊಂಡ ‘ತುಳು’ (https://tcy.wikipedia.org) ಈಗ ನಾಲ್ಕು ವರ್ಷ ಪೂರೈಸಿದ್ದು, ಐದನೇ ವರ್ಷಕ್ಕೆ ಕಾಲಿಡುತ್ತಿದೆ.

ಇಂದಿನ ಡಿಜಿಟಲ್‌ ಕಾಲಮಾನದಲ್ಲಿ ಜಾಗತಿಕ ಮಟ್ಟದಲ್ಲಿ ತುಳುವನ್ನು ಪಸರಿಸುವ, ಅಂದರೆ ವಿಕಿಪೀಡಿಯಾಕ್ಕೆ ಸೇರ್ಪಡೆ ಮಾಡುವ ‘ಸಂಪಾದನೋತ್ಸವ’ (edithon)ವನ್ನು ‘ಕರಾವಳಿ ವಿಕಿಮೀಡಿಯನ್ಸ್‌ ಯೂಸರ್ ಗ್ರೂಪ್ಸ್‌’ ಸದಸ್ಯರು ಮಾಡುತ್ತಿದ್ದಾರೆ. ಈ ತಂಡವು ಇದೇ 6ರಂದು ಸಂಜೆ 4.15ರಿಂದ 5.30ರ ತನಕ ‘ತುಳು ವಿಕಿಪೀಡಿಯ ಐನನೆ ವಡ್ಯಂತಿನ ಐಸ್ರೊ’ (ತುಳು ವಿಕಿಪೀಡಿಯ ಐದನೇ ವರ್ಷದ ಸಂಭ್ರಮ)ವನ್ನು https://bit.ly/tulu4anniv ವೇದಿಕೆಯಲ್ಲಿ ವೆಬಿನಾರ್ ಮೂಲಕ ಆಯೋಜಿಸಿದೆ.

ತುಳುವಿನ ಹಿರಿಯ ಸಾಹಿತಿ–ವಿದ್ವಾಂಸರಾದ ಅಮೃತ ಸೋಮೇಶ್ವರ, ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಪ್ರೊ.ಬಿ.ಎ.ವಿವೇಕ ರೈ ಹಾಗೂ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಲಿದ್ದಾರೆ. ಪ್ರೊ. ಕೆ.ಚಿನ್ನಪ್ಪ ಗೌಡ, ಪ್ರೊ.ಎ.ವಿ.ನಾವಡ, ಯು.ಬಿ.ಪವನಜ, ಬೆನೆಟ್ ಅಮ್ಮನ್ನ, ಡಾ.ವಿಶ್ವನಾಥ ಬದಿಕಾನ, ಕಿಶೋರ್ ಕುಮಾರ್ ರೈ, ಭರತೇಶ್ ಅಲಸಂಡೆ ಮಜಲು ಸೇರಿದಂತೆ ತುಳು ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

‘ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಪುಟಗಳು ಹಾಗೂ ಮೂರೂವರೆ ಲಕ್ಷಕ್ಕೂ ಹೆಚ್ಚು ತುಳು ಶಬ್ದಗಳು ಸೇರ್ಪಡೆಯಾಗಿವೆ. ವಿಶ್ವದ ವಿವಿಧ ದೇಶಗಳಲ್ಲಿರುವ ತುಳುವರು ಬಳಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ತುಳು ಅಭಿವೃದ್ಧಿಗಾಗಿ ವಿಕಿಪೀಡಿಯಾಕ್ಕೆ ಕೊಡುಗೆ ನೀಡಲು ಎಲ್ಲರಿಗೂ ಮುಕ್ತ ಅವಕಾಶ ಇದೆ’ ಎಂದು ತಂಡವು ತಿಳಿಸಿದೆ.

ತುಳು ಸಾಹಿತ್ಯ ಹಾಗೂ ತಾಂತ್ರಿಕತೆ ಕೊಡುಗೆ ನೀಡಿದ ದೊಡ್ಡ ತಂಡವೇ ಇದರ ಹಿಂದಿದ್ದು, ತುಳುವರ ಬೆಂಬಲ ಹಾಗೂ ಪಾಲ್ಗೊಳ್ಳುವಿಕೆಗೆ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗಾಗಿ (ಮೊ.8618361841 ಅಥವಾ ಮೊ.8073922597 ) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT