ಬುಧವಾರ, ಡಿಸೆಂಬರ್ 1, 2021
20 °C
ಚಿತ್ರಸಂತೆ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಬಿ.ಜಿ. ಅಜಯ ಕುಮಾರ್

ಚಿತ್ರಸಂತೆಯಿಂದ ಪ್ರತಿಭಾವಂತರಿಗೆ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪ್ರತಿಭಾವಂತ ಕಲಾವಿದರನ್ನು ಗುರುತಿಸಲು ಚಿತ್ರಸಂತೆ ಅನ್ನುವ ಕಲ್ಪನೆ ದೊಡ್ಡ ವೇದಿಕೆಯಾಗಿದೆ. ಆ ಮೂಲಕ ಕಲಾವಿದರು ತಮ್ಮ ಚಿತ್ರಗಳನ್ನು ಮಾರುಕಟ್ಟೆ ಮಾಡಲು ಅನುಕೂಲ ಆಗಲಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಚಿತ್ರಸಂತೆ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಲಾವಿದರು, ಅಷ್ಟೇ ಏಕೆ ದೃಶ್ಯ ಕಲಾ ವಿದ್ಯಾರ್ಥಿಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿದೆ. ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳ ಭವಿಷ್ಯ ತಮ್ಮ ಕೈಯಲ್ಲಿದೆ. ಅದನ್ನು ಉಪಯೋಗಿಸುವ ಜಾಣ್ಮೆ ಹೊಂದುವುದು ಅವಶ್ಯಕ. ಉತ್ಸವ, ಅಭಿಮಾನದಿಂದ ಯಾರು ಈ ಕೆಲಸ ಮಾಡುತ್ತಾರೆ ಅವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ ಎಂದು ಹೇಳಿದರು.

ತ್ರಸಂತೆ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ ಕುಮಾರ್, ‘ಬೆಂಗಳೂರಿನಲ್ಲಿ ಸಿಮೀತವಾಗಿದ್ದ ಚಿತ್ರಸಂತೆಯನ್ನು ಮಧ್ಯ ಕರ್ನಾಟಕಕ್ಕೂ ವಿಸ್ತರಿಸಲಾಗುತ್ತಿದೆ. ಜನವರಿ 30ರಂದು ನಗರದಲ್ಲಿ ಚಿತ್ರಸಂತೆಯನ್ನು ಆಯೋಜನೆ ಮಾಡಲಾಗಿದೆ’ ಎಂದು ಹೇಳಿದರು.

ಚಿತ್ರಸಂತೆ ಇತಿಹಾಸ ಪುಟ ಸೇರುವ ಕಾರ್ಯಕ್ರಮವಾಗಿದೆ. ಚಿತ್ರ ಕಲಾವಿದರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸುವ ಜೊತೆಗೆ ಅವರ ಚಿತ್ರಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಒಬ್ಬ ಕಲಾವಿದ ತನ್ನ ಕಲ್ಪನೆಯಲ್ಲಿ ಮೂಡಿಸಿದ ಚಿತ್ರಗಳಿಗೆ ಒಂದು ಉತ್ತಮವಾದ ಮಾರುಕಟ್ಟೆ ಒದಗಿಸಬೇಕು. ಅದಕ್ಕಾಗಿ ರಾಜ್ಯದ ವಿವಿಧ ಮೂಲೆಗಳಿಂದ ಚಿತ್ರಕಲಾವಿದರು ಇದರಲ್ಲಿ ಭಾಗಹಿಸುವಂತೆ ಮಾಡುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಅದರಲ್ಲೂ ದೃಶ್ಯ ಮಹಾವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆ ಆಗಲಿದೆ ಎಂದು ತಿಳಿಸಿದರು.

ಚಿತ್ರಸಂತೆ ಮಾಡಿದರೆ ಸಾಲದು, ಉತ್ತಮ ಚಿತ್ರಗಳನ್ನು ಗುರಿತಿಸಿ ಅಂಥ ಚಿತ್ರಗಳ ಕಲಾವಿದರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಬಹುಮಾನ ನೀಡಲಾಗುವುದು. ಹಾಗೆಯೇ ಉತ್ರಮ ಸ್ಟಾಲ್‍ಗೆ ಬಹುಮಾನ ಇಡಲಾಗಿದೆ. ನಗರದ ಸಂಘ-ಸಂಸ್ಥೆಗಳು, ಕಲಾವಿದರು ಇದಕ್ಕೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ದೃಶ್ಯಕಲಾ ಮಹಾವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯದರ್ಶಿ ಶೇಷಾಚಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮಲತಾ, ಮಧು ಪ್ರಾರ್ಥಿಸಿದರು. ದತ್ತಾತ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು