ಚನ್ನಗಿರಿ (ದಾವಣಗೆರೆ): ಧರ್ಮಸ್ಥಳ ಸಂಘದಲ್ಲಿ ಪಡೆದ ಸಾಲ ಮರು ಪಾವತಿಸದಹೆಂಡತಿಯ ಮೇಲೆ ಕೋಪಗೊಂಡ ಪತಿ ಆಕೆಯ ಮೂಗಿನ ತುದಿ ಕಚ್ಚಿ ತುಂಡರಿಸಿದ್ದಾನೆ.

ತಾಲ್ಲೂಕಿನ ಮಂಟರಘಟ್ಟ ಗ್ರಾಮದ ವಿದ್ಯಾ (30) ಗಾಯಗೊಂಡಿದ್ದು, ಚನ್ನಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಯೊಂದಕ್ಕೆದಾಖಲಾಗಿದ್ದಾರೆ. ಪತಿ ವಿಜಯ್(35) ವಿರುದ್ಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾ ಅವರು ಸಂಘದಲ್ಲಿ ₹2 ಲಕ್ಷ ಸಾಲ ಪಡೆದಿದ್ದರು. ಇದಕ್ಕೆ ಪತಿ ಜಾಮೀನು ನೀಡಿದ್ದ. ಆರಂಭದಿಂದ ಸಾಲದ ಕಂತು ಪಾವತಿಸುತ್ತಾ ಬಂದಿದ್ದ ವಿದ್ಯಾ, ಕೊನೆಯ ಮೂರು ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದರು.

‘ಸಂಘದವರು ವಿಜಯ್ಗೆ ಕರೆ ಮಾಡಿ ಕಂತು ಪಾವತಿಸದೇ ಇರುವ ಬಗ್ಗೆ ಪ್ರಶ್ನಿಸಿದ್ದರು. ಬಳಿಕ ನೋಟಿಸ್ ಕೂಡ ನೀಡಿದ್ದರು. ಇದರಿಂದ ಕೋಪಗೊಂಡ ಆರೋಪಿ, ಮಂಗಳವಾರ ರಾತ್ರಿ ಕುಡಿದು ಹೋಗಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಮೂಗಿನ ತುದಿಯನ್ನು ಕಚ್ಚಿ ತುಂಡರಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.