ಹರಿಹರ: ಸೈಬರ್ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು ಕೆನರಾ ಬ್ಯಾಂಕ್ ಗರಿಷ್ಠ ಸುರಕ್ಷತೆ ಒದಗಿಸಿದೆ ಎಂದು ಇಲ್ಲಿನ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಚನ್ನಕೇಶವ ವಿ.ಎನ್. ಹೇಳಿದರು.

ನಗರದ ಹಳೆ ಪಿ.ಬಿ.ರಸ್ತೆಯಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಆಯೋಜಿಸಿದ್ದ, ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ 173ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೈಬರ್ ವಂಚನೆಯನ್ನು ಪರಿಣಾಮಕಾರಿಯಾಗಿ ತಡೆಯಲು ಕೈಗೊಂಡ ಕ್ರಮಗಳಿಗಾಗಿ ಕೆನರಾ ಬ್ಯಾಂಕ್ 2024-25ನೇ ಸಾಲಿನಲ್ಲಿ ಕೇಂದ್ರದ ಹಣಕಾಸು ಸಚಿವರ ಪ್ರಶಸ್ತಿ ಪಡೆದಿದೆ ಎಂದರು.

ಸಾಲ ಮರುಪಾವತಿ ದ್ರಷ್ಟಿಯಿಂದ ಉಳ್ಳವರಿಗೆ ಸಾಲ ನೀಡುವ ಬ್ಯಾಂಕ್ಗಳ ನೀತಿಗೆ ಅಪವಾದವಾಗಿ ಕೆನರಾ ಬ್ಯಾಂಕ್ ಸೇವೆ ನೀಡುತ್ತಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ಕೆ.ಎಂ. ಹೇಳಿದರು.

ಬ್ರಹ್ಮಾನಂದ ಮಠದ ಮುಖ್ಯಸ್ಥ ವಿವೇಕಾನಂದ ಸ್ವಾಮಿ ಮಾತನಾಡಿದರು. ಗ್ರಾಹಕರು, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.