ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಯಲ್ಲಿ ರೈತರೊಬ್ಬರು ಬೆಳೆದಿದ್ದ ತರಕಾರಿ ಬೆಳೆಯು ಮಳೆ ನೀರಿನಿಂದ ಹಾಳಾಗಿದ್ದು ಜಮೀನಿನಲ್ಲಿ ಹುಲ್ಲು ಬೆಳೆದಿರುವುದು
ಮಾಯಕೊಂಡ ಭಾಗದಲ್ಲಿ ತಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಗಳ ಇಳುವರಿ ಕುಂಠಿತಗೊಂಡಿದೆ. ಮಳೆ ಹೆಚ್ಚಾಗಿ ಶೀತ ಉಂಟಾಗಿದ್ದರಿಂದ ಕೆಲ ರೈತರು ಬೆಳೆ ನಾಶಗೊಳಿಸಿ ಮತ್ತೆ ಬಿತ್ತನೆ ಮಾಡಿದ್ದರು
ಶಶಿ ಪೂಜಾರ್ ರೈತ ಮಾಯಕೊಂಡ
ನಮ್ಮ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಬೆಳೆಗಳು ನಾಶವಾಗಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿಲ್ಲ
ರವಿ ರೈತ ಅಸಗೋಡು (ಜಗಳೂರು)
ಮುಂಗಾರು ಅವಧಿಯಲ್ಲಿ ಮಳೆಯಿಂದ ಹಾನಿಗೀಡಾದ ಬೆಳೆಯ ಸಮೀಕ್ಷೆ ನಡೆಯುತ್ತಿದೆ. ಹರಿಹರ ತಾಲ್ಲೂಕಿನಲ್ಲಿ ಮುಗಿದಿದ್ದು ಜಗಳೂರು ತಾಲ್ಲೂಕಿನಲ್ಲಿ ಪ್ರಗತಿಯಲ್ಲಿದೆ. ಮುಗಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಲಾಗುವುದು