‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದ ಸದಸ್ಯರು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ
ಸಮಾಜವು ನಮ್ಮನ್ನು ಬೇರೆ ರೀತಿಯೇ ನೋಡುತ್ತಿದ್ದು ನಾವೆಲ್ಲ ಒಂದುಗೂಡಬೇಕು. ಎಲ್ಲರಂತೆ ನಾವೂ ಕುಟುಂಬದವರೊಂದಿಗೆ ಹಬ್ಬವನ್ನು ಸಂಭ್ರಮಿಸಬೇಕು ಎಂಬ ಉದ್ದೇಶದಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ
ಎ.ನಾಗರಾಜ್ ‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದ ಅಧ್ಯಕ್ಷ
ಅಂಗವಿಕಲೆಯ ನೆರವು
‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದ ಸದಸ್ಯರಿಗೆ ಗಣೇಶೋತ್ಸವ ವೇಳೆ ಸಾರ್ವಜನಿಕರು ವ್ಯಾಪಾರಿಗಳೊಂದಿಗೆ ಸಂವಹನ ಸಾಧಿಸಲು ಸಮಸ್ಯೆಯಾಗುತ್ತದೆ. ಹೀಗಾಗಿ ಅವರ ನೆರವಿಗೆ ಅಂಗವಿಕಲೆಯಾದ ಮೇಘನಾ ಕೆ.ಜಿ.ಎಚ್. ಮುಂದಾಗಿದ್ದಾರೆ. 6 ವರ್ಷಗಳಿಂದ ಸಂಘದ ಸದಸ್ಯರೊಂದಿಗೆ ಗುರುತಿಸಿಕೊಂಡಿರುವ ಮೇಘನಾ ಅವರು ಕಿವುಡ ಮತ್ತು ಮೂಗರಿಗೆ ನೆರವಾಗುವ ಉದ್ದೇಶದಿಂದ ‘ಇಂಡಿಯನ್ ಸೈನ್ ಲಾಂಗ್ವೇಜ್’ ತರಬೇತಿಯನ್ನೂ ಪಡೆದಿದ್ದಾರೆ. ಪಕ್ಕದಲ್ಲೇ ಚಹಾ ಅಂಗಡಿ ಹೊಂದಿರುವ ಮೇಘನಾ ಗಣೇಶ ಮೂರ್ತಿ ಖರೀದಿ ಅನ್ನ ಸಂತರ್ಪಣೆ ಸೇರಿದಂತೆ ಎಲ್ಲಾ ಕಾರ್ಯಗಳಲ್ಲೂ ಸಾರ್ವಜನಿಕರು ವ್ಯಾಪಾರಿಗಳೊಂದಿಗೆ ಸಂವಹನ ಸಾಧಿಸುತ್ತಿದ್ದಾರೆ.