ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಮಂದಿಗೆ ಸೋಂಕು: ದ್ವಿಶತಕ ದಾಟಿದ ಪ್ರಕರಣಗಳ ಸಂಖ್ಯೆ

Last Updated 7 ಜೂನ್ 2020, 13:11 IST
ಅಕ್ಷರ ಗಾತ್ರ

ದಾವಣಗೆರೆ: ನಾಲ್ವರು ನರ್ಸ್‌ಗಳು, ಆರೋಗ್ಯ ಇಲಾಖೆಯ ಇಬ್ಬರು ಡಿ ಗ್ರೂಪ್‌ ನೌಕರರು, ಒಬ್ಬ ಬಾಲಕ ಸೇರಿ ಒಟ್ಟು 17 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ದ್ವಿಶತಕ ದಾಟಿದೆ.

50 ವರ್ಷದ ಮಹಿಳೆ (ಪಿ.5300), 42 ವರ್ಷದ ಪುರುಷ (5309), 31, 42 ಮತ್ತು 48 ವರ್ಷದ ಮಹಿಳೆಯರು (ಪಿ.5310, ಪಿ.5312, ಪಿ.5313) ಜಿಲ್ಲಾ ಆಸ್ಪತ್ತೆಯಲ್ಲಿ ಕೆಲಸ ಮಾಡುವವರು. ಜತೆಗೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬಂದು ಕೆಲಸ ಮಾಡುತ್ತಿದ್ದ 36 ವರ್ಷದ ಮಹಿಳೆಗೂ (ಪಿ.5311) ಕೊರೊನಾ ಸೋಂಕು ಬಂದಿದೆ. ಅವರನ್ನು ಕಂಟೈನ್‌ಮೆಂಟ್‌ ವಲಯದ ಸಂಪರ್ಕ ಎಂದು ಗುರುತಿಸಲಾಗಿದೆ.

ಮೇ 31ರಂದು ಮೃತಪಟ್ಟು, ಜೂನ್‌ 4ಕ್ಕೆ ಕೊರೊನಾ ಇರುವುದು ಖಚಿತಪಟ್ಟಿದ್ದ ಬಸವರಾಜಪೇಟೆಯ 83 ವರ್ಷದ ವೃದ್ಧೆಯಿಂದ ಐವರಿಗೆ ಸೋಂಕು ತಗುಲಿದೆ. 23, 20, 46, 42 ವರ್ಷದ ಮಹಿಳೆಯರು (ಪಿ. 5301, ಪಿ.5302, ಪಿ.5303, ಪಿ.5305) ಮತ್ತು 45 ವರ್ಷದ ವ್ಯಕ್ತಿಗೆ (ಪಿ.5304) ಸೋಂಕು ಬಂದವರು.

ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕೆಟಿಜೆ ನಗರ ಪೊಲೀಸ್‌ ಕ್ವಾಟ್ರರ್ಸ್‌ ನಿವಾಸಿ ಹೆಡ್‌ಕಾನ್‌ಸ್ಟೆಬಲ್‌ನಿಂದ (ಪಿ.3637) 9 ವರ್ಷದ ಬಾಲಕನಿಗೆ (ಪಿ.5308) ಸೋಂಕು ಬಂದಿದೆ.

ಎಸ್‌ಜೆಎಂ ನಗರದ 35 ವರ್ಷದ ಮಹಿಳೆಯಿಂದ (ಪಿ.1247) 46, 24 ವರ್ಷದ ಮಹಿಳೆಯರಿಗೆ (ಪಿ.5306, ಪಿ.5307) ಮತ್ತು 44 ವರ್ಷದ ವ್ಯಕ್ತಿಗೆ (ಪಿ.5315) ವೈರಸ್‌ ಸೋಂಕು ತಗುಲಿದೆ.

ಕಂಟೈನ್‌ಮೆಂಟ್‌ ವಲಯದ ಸಂಪರ್ಕದಿಂದ ಹೊಂಡದ ಸರ್ಕಲ್‌ನ 71 ವರ್ಷದ ವೃದ್ಧೆಗೆ (ಪಿ.5299) ಸೋಂಕು ಬಂದಿದ್ದರೆ, ಜಾಲಿನಗರದ 60 ವರ್ಷದ ಮಹಿಳೆಯಿಂದ (ಪಿ.4839) 53 ವರ್ಷದ ಮಹಿಳೆಗೆ (ಪಿ.5314) ಸೋಂಕು ಹರಡಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕು ಪತ್ತೆಯಾದ ಪ್ರಕರಣಗಳ ಸಂಖ್ಯೆ 203ಕ್ಕೆ ಏರಿದೆ. ಅದರಲ್ಲಿ 150 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. 47 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT