ಮಾಯಕೊಂಡ: ಕ್ಷೇತ್ರದ ಪ್ರತೀ ಹಳ್ಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ನನ್ನ ಆದ್ಯತೆಯಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.

ಇಲ್ಲಿಗೆ ಸಮೀಪದ ವಡೇರಹಳ್ಳಿಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿರು.

ವಡೇರಹಳ್ಳಿ ಮತ್ತು ಕಳವೂರು ಗ್ರಾಮಗಳಿಗೆ ಇತಿಹಾಸದಲ್ಲಿಯೇ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯ ಇರಲಿಲ್ಲ. ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ಪರಿಶಿಷ್ಟ ಜಾತಿ ಮೊರಾರ್ಜಿ ವಸತಿ ಶಾಲೆ ಮತ್ತು ಪರಿಶಿಷ್ಟ ಪಂಗಡದ ಶಾಲೆಯಿದ್ದು, ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇರಲಿಲ್ಲ. ಅವರು ಆಟೊ ಅವಲಂಬಿಸಬೇಕಿತ್ತು. ಕೆಲವರು ನಡೆದೇ ಶಾಲೆಗೆ ಹೋಗಬೇಕಿತ್ತು. ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದರು. ಇನ್ನು ಈ ಸಮಸ್ಯೆ ಇರುವುದಿಲ್ಲ ಎಂದು ಬಸವಂತಪ್ಪ ಹೇಳಿದರು.

ನೂತನ ಬಸ್, ದಾವಣಗೆರೆ– ಕಳವೂರು- ವಡೇರಹಳ್ಳಿ- ಮಾಯಕೊಂಡ- ಹುಚ್ಚವ್ವನಹಳ್ಳಿ- ಬಸವಾಪುರ- ಗಂಜಿಗಟ್ಟೆ ಮಾರ್ಗದಲ್ಲಿ ಸಂಚರಿಸಿ, ಇದೇ ಮಾರ್ಗದಲ್ಲಿ ದಾವಣಗೆರೆಗೆ ವಾಪಸಾಗಲಿದೆ. ತಮ್ಮ ಗ್ರಾಮದಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಕಂಡು ಜನರು ಸಂಭ್ರಮಿಸಿದರು.

ಮುಖಂಡರಾದ ಕೆ.ಬಿ.ಮಂಜಪ್ಪ, ನಾಗರಾಜಪ್ಪಗೌಡ್ರು, ರಂಗಪ್ಪ, ಅಜ್ಜಣ್ಣ, ಉಜ್ಜಪ್ಪ, ಹನುಮಂತಪ್ಪ, ಪ್ರಾoಶುಪಾಲರಾದ ಮಸೂದ್ ಅಹಮದ್, ದೈಹಿಕ ಶಿಕ್ಷಕ ರಂಗನಾಥ್, ಶಿಕ್ಷಕರಾದ ಬಸವರಾಜ್ ಮಜ್ಜಿಗಿ, ನಿಲಯ ಪಾಲಕರು ವೀರೇಂದ್ರ ಪಾಟೀಲ್, ನಾಗೇಶ್ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.