ಹರಿಹರ: ಮಹಾ ತಪಸ್ವಿ ಫೌಂಡೇಶನ್ ವತಿಯಿಂದ ಗುರುವಾರ ನಗರದ ಹೊರವಲಯದ ಅಮರಾವತಿ ಆಂಜನೇಯ ಬಡಾವಣೆಯಲ್ಲಿನ ಮರುಳ ಸಿದ್ದೇಶ್ವರ ವಿಶೇಷ ಚೇತನ ಮಕ್ಕಳ ವಸತಿ ನಿಲಯದ ಆವರಣದಲ್ಲಿ ಸಾವಿರ ವೃಕ್ಷ– ಪ್ರಕೃತಿ ಸುಭಿಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಫೌಂಡೇಶನ್ನ ಶಾಂತಕುಮಾರಿ ಮತ್ತು ಉಮೇಶ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಫೌಂಡೇಶನ್ ಸ್ಥಾಪಕ ಅವಧೂತ ಕವಿಗುರುರಾಜ ಶ್ರೀ ಅವರ ಮಾರ್ಗದರ್ಶನದಲ್ಲಿ ಈ ಪರಿಸರ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆ ಮಾಡುವ ದೃಷ್ಟಿಯಿಂದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಸಿಗಳನ್ನು ನೆಟ್ಟು ಪೋಷಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಂತಕುಮಾರಿ ಹೇಳಿದರು.

ತಾಲ್ಲೂಕಿನ ಕಡಾರನಾಯಕನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿಯೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಕೆ.ಶಿವರಾಜ್ ಸಸಿನೆಟ್ಟು, ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯಶಿಕ್ಷಕ ಮಂಜಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಧನರಾಜ್, ಮಂಜುನಾಥ್ ಮತ್ತು ಪೋಷಕರಾದ ಮಂಜುನಾಥ್ ಗೌಡ್ರು, ಶಿಕ್ಷಕ ಕುಬೇರಪ್ಪ, ಫೌಂಡೇಶನ್ನ ಸುನೀತಾ ಧನರಾಜ್, ಭರತ್, ನಾಗರಾಜ್ ಕೋಡಿಹಳ್ಳಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಅಂಬುಜಾ ರಾಜೋಳಿ, ಉಮೇಶ್ ಹಿರೇಮಠ್, ಅರುಣ್, ವಕೀಲ ವೀರೇಶ್ ಅಜ್ಜಣ್ಣನವರ್, ಧನರಾಜ್, ಗೀತಾ ನಾಗರಾಜ್, ಜಯಲಕ್ಷ್ಮೀ, ವಜ್ರೇಶ್ವರಿ, ಯೋಗೇಶ್, ಹನುಮಂತಪ್ಪ, ನಾಗರತ್ನಮ್ಮ, ಶೋಭಾ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.