ಶನಿವಾರ, ಫೆಬ್ರವರಿ 4, 2023
28 °C
ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ

ಲಂಚ ಪಡೆಯುತ್ತಿದ್ದ ದೇವಿಕೆರೆ ಪಿಡಿಒ ಬಸವರಾಜಪ್ಪ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ತಾಲ್ಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿ ಪಿಡಿಒ ಬಿ. ಬಸವರಾಜಪ್ಪ ಅವರು ಮನೆಯ ಇ-ಸ್ವತ್ತು ಖಾತೆ ಮಾಡಿಕೊಡಲು ಗ್ರಾಮಸ್ಥರೊಬ್ಬರಿಂದ ₹ 5,000 ಪಡೆಯುತ್ತಿದ್ದ ವೇಳೆ ದಾವಣಗೆರೆಯಲ್ಲಿ ಶುಕ್ರವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ದೇವಿಕೆರೆ ಪಂಚಾಯಿತಿ ವ್ಯಾಪ್ತಿಯ ಮೆದಿಕೆರೇನಹಳ್ಳಿ ಗ್ರಾಮದ ಶಾಂತಕುಮಾರ್ ಎಂಬುವವರ ತಾಯಿ ಶಾರದಮ್ಮ ಹೆಸರಿನಲ್ಲಿರುವ ಮನೆಯ ಇ-ಸ್ವತ್ತು ಖಾತೆಯನ್ನು ಮಾಡಿಕೊಡಲು ಪಿಡಿಒ ಬಿ. ಬಸವರಾಜಪ್ಪ ₹ 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದರು. ದೂರುದಾರರ ದೂರಿನ ಆಧಾರದ ಮೇಲೆ ಬಲೆ ಬೀಸಿದ ಲೋಕಾಯುಕ್ತರು ದಾವಣಗೆರೆ ನಗರದ ಹಳೇ ಬಸ್ ನಿಲ್ದಾಣದ ಸಮೀಪ ಕಟ್ಟಡವೊಂದರಲ್ಲಿ ಪಿಡಿಒ ಬಸವರಾಜಪ್ಪ ದೂರುದಾರರಿಂದ ₹ 5000 ಪಡೆಯುತ್ತಿದ್ದಾದ ದಾಳಿ ನಡೆಸಿ ಬಂಧಿಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಅಧೀಕ್ಷಕರಾದ ಎಂ.ಎಸ್. ಕೌಲಾಪೂರೆ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ರಾಷ್ಟ್ರಪತಿ, ಆಂಜನೇಯ ಹಾಗೂ ಸಿಬ್ಬಂದಿ ಚಂದ್ರಶೇಖರ್, ವೀರೇಶಯ್ಯ, ಸುರೇಶ್, ಧನರಾಜ್, ಮೋಹನ್, ಬಸವರಾಜ ಹಾಗೂ ವಿನಾಯಕ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು