ತ್ಯಾವಣಿಗೆ: ಗ್ರಾಮದ ಇತಿಹಾಸ ಪ್ರಸಿದ್ಧ ಬೆಟ್ಟದ ಮಲ್ಲೇಶ್ವರ ಸ್ವಾಮಿಯ ಕೆಂಡಾರ್ಚನೆ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾಪೂಜೆಯೊಂದಿಗೆ ರುದ್ರಾಭಿಷೇಕ ಪೂಜಾ ವಿಧಿವಿಧಾನಗಳು ನಡೆದವು. ಸ್ವಾಮಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಗ್ರಾಮದ ವೀರಭದ್ರೇಶ್ವರ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಗುಳ್ಳಮ್ಮ, ಕರಿಯಮ್ಮ, ಆಂಜನೇಯ ದೇವರ ಉತ್ಸವ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಅಗ್ನಿ ಕುಂಡದ ಬಳಿ ಕರೆತರಲಾಯಿತು.

ಸಂಪ್ರದಾಯದಂತೆ ಗ್ರಾಮದ ಗೌಡ್ರು ಮನೆಯಿಂದ ತರಲಾದ ಬುತ್ತಿಹುಂಡೆ, ಹೋಳಿಗೆ ಇತರೆ ಪ್ರಸಾದವನ್ನು ಬಾಳೆ ಎಲೆಯಲ್ಲಿ ಅಗ್ನಿ ಕುಂಡದ 4 ದಿಕ್ಕುಗಳಲ್ಲಿ ಇಟ್ಟು ಕರ್ಪೂರ ಹಚ್ಚಿ ನೈವೇದ್ಯ ಮಾಡಲಾಯಿತು. ಪ್ರಸಾದವನ್ನು ತೆಗೆದುಕೊಂಡ ನಂತರ ಬೆಟ್ಟದ ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಹೊತ್ತವರು ಹಾಗೂ ಹರಕೆ ಹೊತ್ತ ಭಕ್ತರು ಕೆಂಡ ತುಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.