ಸಮವಸ್ತ್ರವಿಲ್ಲ, ಒತ್ತಡವೂ ಇಲ್ಲ
‘ನಾನ್ ಎಕ್ಸಿಕ್ಯೂಟಿವ್’ ಘಟಕಗಳು ಸರ್ಕಾರದ ಇತರ ಇಲಾಖೆಯ ಕಚೇರಿಗಳಂತೆ ಕಾರ್ಯ ನಿರ್ವಹಿಸುತ್ತವೆ. ಪೊಲೀಸರ ಕಾರ್ಯವೈಖರಿ ಇಲ್ಲಿ ಕೊಂಚ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೆಲಸದ ಅವಧಿ. ವಾರಾಂತ್ಯ ಹಾಗೂ ಇತರ ಸರ್ಕಾರಿ ರಜೆಗಳು ಸುಲಭವಾಗಿ ಸಿಗುತ್ತವೆ. ಸಮವಸ್ತ್ರ ಧರಿಸದ ಈ ಹುದ್ದೆಗಳಿಗೆ ನಿಯುಕ್ತರಾಗಲು ಪೊಲೀಸರಲ್ಲಿ ಉತ್ಸುಕತೆ ಕಾಣುತ್ತಿದೆ. ಡಿಸಿಆರ್‌ಇ ಜಿಲ್ಲಾ ಘಟಕಕ್ಕೆ ನಿಯುಕ್ತಿಗೊಳಿಸುವಂತೆ ಕೋರಿ 45 ಪೊಲೀಸರು ಸ್ವ–ಇಚ್ಛೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕೋರಿಕೆ ಸಲ್ಲಿಸಿದ್ದಾರೆ.