ದಾವಣಗೆರೆ: ‘ನನಗೆ ವಯಸ್ಸಾಗುತ್ತಿದ್ದು, ಮರೆವೂ ಹೆಚ್ಚುತ್ತಿದೆ. ನೆರವು ನೀಡುತ್ತೇನೆ ಎಂದು ಯಾರಿಗಾದರೂ ನಾನು ಭರವಸೆ ನೀಡಿ ಮರೆತಿದ್ದರೆ ನೆನಪು ಮಾಡಿಕೊಡಿ. ಬಂದು ಹಣ ಪಡೆದುಕೊಳ್ಳಿ’

‘ದಾವಣಗೆರೆಯ ಕೊಡುಗೈ ದಾನಿ’ ಎಂದೇ ಕರೆಸಿಕೊಂಡಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಾಯಕನಹಟ್ಟಿಯ ಕಾರ್ಯಕ್ರಮವೊಂದರಲ್ಲಿ ಹಲವು ವರ್ಷಗಳ ಹಿಂದೆ ಹೇಳಿದ್ದ ಮಾತಿದು. ಅವರಿಂದ ದಾನ ಪಡೆಯದ ಊರು, ಧರ್ಮ, ಜಾತಿ, ಸಮುದಾಯಗಳೇ ಇಲ್ಲ ಎನ್ನಬಹುದು. ‘ಒಂದು ವೇಳೆ ವಾಗ್ದಾನ ನೀಡಿ ಮರೆತಿದ್ದರೆ ಬಂದು ಕೇಳಿ’ ಎಂದು ಹೇಳುವಷ್ಟರ ಮಟ್ಟಿಗೆ ಅವರ ದಾನದ ಕೈ ವಿಸ್ತಾರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಮ್ಮ ಉದ್ಯಮದ ಕಾರಣಕ್ಕಷ್ಟೇ ಅಲ್ಲದೇ, ದಾನ-ಧರ್ಮದಲ್ಲಿಯೂ ‘ಧಣಿ’ ಎನಿಸಿಕೊಂಡವರು. ಜಿಲ್ಲೆ, ಹೊರ ಜಿಲ್ಲೆ, ಸಣ್ಣಪುಟ್ಟ ಹಳ್ಳಿಗಳೂ ಸೇರಿದಂತೆ ಎಲ್ಲಿಯೇ ಆಗಲಿ ದೇಗುಲ, ಸಮುದಾಯ ಭವನ, ಪ್ರಸಾದ ನಿಲಯ, ವಿದ್ಯಾರ್ಥಿ ನಿಲಯಗಳ ನಿರ್ಮಾಣ ವಿಚಾರದಲ್ಲಿ ಯಾವುದೇ ಜಾತಿ, ಧರ್ಮ, ಪಂಥಗಳನ್ನು ನೋಡದೇ ಕೈ ಎತ್ತಿ ಮೊಗೆದು ಕೊಟ್ಟ ವ್ಯಕ್ತಿತ್ವ ಅವರದ್ದು. ಮಠ–ಮಾನ್ಯಗಳಿಗಂತೂ ಉದಾರವಾಗಿ ದಾನ ಮಾಡಿದ್ದಾರೆ. ಸಿದ್ಧಾಂತವೇ ಬೇರೆ, ರಾಜಕೀಯವೇ ಬೇರೆ ದಾನ–ಧರ್ಮವೇ ಬೇರೆ ಎಂಬುದನ್ನು ಶಾಮನೂರು ಶಿವಶಂಕರಪ್ಪ ಅವರು ತಮ್ಮ ತುಂಬು ಜೀವನದುದ್ದಕ್ಕೂ ಪದೇಪದೇ ನಿರೂಪಿಸಿದ್ದಾರೆ.

ಅದು 2006ನೇ ಇಸವಿ ಇರಬಹುದು. ದಾವಣಗೆರೆ ನಗರದ ರಿಂಗ್ ರಸ್ತೆಯಲ್ಲಿ ಶಾರದಾಂಬಾ ದೇಗುವಲನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿತ್ತು. ಶಾಮನೂರು ಶಿವಶಂಕರಪ್ಪ ಅವರಿಗಿಂತ ಸೈದ್ಧಾಂತಿಕವಾಗಿ ಭಿನ್ನ ಪಥದಲ್ಲಿದ್ದ ಮೋತಿ ರಾಮರಾವ್, ಡಾ. ಹಗಡೆ ಇತರರು ದೇಗುಲ ನಿರ್ಮಾಣಕ್ಕೆ ದೇಣಿಗೆ ಕೇಳಲು ಮುಂದಾದರು. ದೇವರಿಗೆ ಸಂಬಂಧಪಟ್ಟ ವಿಚಾರದಲ್ಲಿ ಅವರು ಹಿಂದುಮುಂದು ಯೋಚಿಸಲಿಲ್ಲ. ತಮ್ಮ ಸಹಾಯಕರನ್ನು ಕರೆಸಿ, ತಕ್ಷಣವೇ ₹ 5 ಲಕ್ಷ ನೋಟಿನ ಕಂತೆಗಳನ್ನು ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದ ಮುಖಂಡರ ಕೈಗಿತ್ತರು. ಸಿದ್ಧಾಂತ, ರಾಜಕೀಯವನ್ನೂ ಮೀರಿ ಶಾಮನೂರು ಅವರು ನಡೆದುಕೊಂಡ ರೀತಿಯನ್ನು ಹಾಗೂ ಅಷ್ಟು ದೊಡ್ಡ ಮೊತ್ತವನ್ನು ಅವರಾರೂ ನಿರೀಕ್ಷಿಸಿರಲಿಲ್ಲ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಅಂದಿನ ಅವರ ಒಡನಾಡಿಯಾಗಿದ್ದ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್.

‘ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ 500 ಜನರು ಏಕಕಾಲಕ್ಕೆ ಕುಳಿತು ಪ್ರಸಾದ ಸೇವಿಸುವ ದಾಸೋಹ ಭವನ ನಿರ್ಮಿಸಿಕೊಟ್ಟರು. ಇದಾದ ಬಳಿಕವೇ ದೇಗುಲದಲ್ಲಿ ಮೊದಲ ಬಾರಿಗೆ ದಾಸೋಹ ಆರಂಭವಾಯಿತು. ಒಳಮಠದ ಗರ್ಭಗುಡಿಯ ಬೆಳ್ಳಿ ಮಂದಹಾಸಕ್ಕೆ ಹಾಗೂ ಗರ್ಭಗುಡಿಯ ಮೂರ್ತಿಗೆ ಚಿನ್ನದ ಮುಖಪದ್ಮಕ್ಕೂ ದೇಣಿಗೆ ನೀಡಿದ್ದರು. ಮನೆದೇವರು ಚಿಕ್ಕಜಾಜೂರು ಬಳಿಯ ಹಿರೇ ಎಮ್ಮಿಗನೂರಿನ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ’ ಎಂದು ಸ್ಥಳೀಯರು ಸ್ಮರಿಸುತ್ತಾರೆ.

ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ ಬಯಲು ರಂಗಮಂದಿರ ನಿರ್ಮಾಣ ಹಾಗೂ ವಸತಿ ನಿಲಯಗಳ ಕಟ್ಟಡ ನಿರ್ಮಾಣ ಲಕ್ಷಾಂತರ ದೇಣಿಗೆ ನೀಡಿದ್ದಾರೆ. ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪ ಹಾಗೂ ಚಿತ್ರದುರ್ಗದ ಹೊರವಲಯದಲ್ಲಿರುವ ಎಸ್. ನಿಜಲಿಂಗಪ್ಪ ಸಮಾಧಿ ಸ್ಮಾರಕ ನಿರ್ಮಾಣದಲ್ಲಿ ಶಿವಶಂಕರಪ್ಪ ಅವರದ್ದು ಬಹುದೊಡ್ಡ ನೆರವಿನ ಹಸ್ತ. ಅವರ ಉದಾರ ಮನೋಭಾವಕ್ಕೆ ಸಾಕ್ಷಿ ಎಂಬಂತೆ ಕಳೆದ ಆಗಸ್ಟ್ನಲ್ಲಿ ನಂಜನಗೂಡಿನ ಸುತ್ತೂರು ಮಠದಲ್ಲಿ ಅತಿಥಿಗೃಹ ನಿರ್ಮಿಸಿ ಉದ್ಘಾಟಿಸಿದ್ದರು. ದಾವಣಗೆರೆಯ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ, ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನ ಯೋಗಿ ದೇವಾಲಯ ನಿರ್ಮಾಣಕ್ಕೆ ₹ 15 ಲಕ್ಷ ನೀಡಿದ್ದರು. ಹೆಬ್ಬಾಳದಲ್ಲಿ ಮುರುಘಾಮಠದಿಂದ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡವನ್ನು ಪೂರ್ಣಗೊಳಿಸಿದ್ದರು. ಎಷ್ಟೋ ದಾನ ಕಾರ್ಯಗಳ ಪೈಕಿ ಇವು ನಿದರ್ಶನಗಳು ಮಾತ್ರ. ಇಂತಹ ಅಸಂಖ್ಯಾತ ಧಾರ್ಮಿಕ ಕಾರ್ಯಗಳ ಹಿಂದಿರುವ ದೊಡ್ಡ ಶಕ್ತಿ ಶಿವಶಂಕರಪ್ಪ.

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡುವ ಉದ್ದೇಶದಿಂದ ಶಾಮನೂರು ಶಿವಶಂಕರಪ್ಪ ‘ಜನಕಲ್ಯಾಣ ಟ್ರಸ್ಟ್’ ಸ್ಥಾಪಿಸಿದ್ದರು. ಇದಕ್ಕಾಗಿ ₹ 8 ಕೋಟಿ ನಿಧಿ ಮೀಸಲಿಟ್ಟು, ಅದರ ಬಡ್ಡಿ ಹಣದಲ್ಲಿ ಬಡ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ. ತಮ್ಮ ಟ್ರಸ್ಟ್ ವತಿಯಿಂದ ಆರೋಗ್ಯ ಶಿಬಿರ ಮತ್ತು ಉಚಿತ ಚಿಕಿತ್ಸೆಗಾಗಿ ವಾರ್ಷಿಕ ₹ 20 ಕೋಟಿ ಮೀಸಲಿಟ್ಟಿದ್ದರು. ಮಕ್ಕಳ ಮದುವೆಗೆ ನೆರವು ಕೇಳಿಕೊಂಡು ಮನೆಗೆ ಬಂದ ಯಾವುದೇ ಬಡವರನ್ನೂ ಅವರು ಬರಿಗೈಲಿ ಕಳಿಸಿದ ಉದಾಹರಣೆ ಇಲ್ಲ.

ಬಡವರು, ಕಾರ್ಮಿಕರ ಬಗೆಗಿನ ಶಿವಶಂಕರಪ್ಪ ಅವರ ಕಾಳಜಿ ಸ್ಮರಣೀಯ. 2005ರಲ್ಲಿ ದುಗ್ಗಮ್ಮ ಜಾತ್ರೆಯ ವೇಳೆ ತನ್ನ ನೌಕರರಿಗೆ ವೇತನ ಒದಗಿಸಲು ನಗರಪಾಲಿಕೆಗೆ ಸಾಧ್ಯವಾಗಲಿಲ್ಲ. ಕಾರ್ಮಿಕರಿಗೆ ಹಬ್ಬದ ಸಂಭ್ರಮ ಇಲ್ಲದಂತಾಗಬಾರದು ಎಂದು ಶಾಮನೂರು ಯೋಚಿಸಿದರು. ಪಾಲಿಕೆಯ ಪರವಾಗಿ ತಾತ್ಕಾಲಿಕವಾಗಿ ಹಣದ ವ್ಯವಸ್ಥೆ ಮಾಡಿದ್ದರು. ‘ವೇತನ ಬಂದಾಗ ವಾಪಸ್ ಕೊಡಿ’ ಎಂದು ಹೇಳಿ, ₹ 20 ಲಕ್ಷದಷ್ಟು ಹಣವನ್ನು ತಮ್ಮ ಕೈಯಿಂದ ನೀಡಿ, ಕಾರ್ಮಿಕರ ಮೊಗದಲ್ಲಿ ಹಬ್ಬದ ಕಳೆ ಹೆಚ್ಚಿಸಿದ್ದರು ಎಂದು ಸ್ಮರಿಸುತ್ತಾರೆ ಅವರ ಒಡನಾಡಿಗಳು.

‘ಹಣ ಬಂದಾಗ ಸೊಕ್ಕು ಬರಬಾರದು. ಅದನ್ನು ಸರಿಯಾಗಿ ಬಳಸುವ ಬುದ್ಧಿ ಇರಬೇಕು. ಹಣದಿಂದ ಅಹಂಕಾರ ಬಂದರೆ ಹಾಳಾಗುತ್ತೀರಿ’ ಎಂಬುದು ಶಾಮನೂರು ಶಿವಶಂಕರಪ್ಪ ಅವರ ಅನುಭವದ ಮಾತು. ‘ದುಡಿಮೆಯ ಒಂದು ಭಾಗವನ್ನು ದಾನ– ಧರ್ಮಕ್ಕೆ ಮೀಸಲಿಡಬೇಕು. ನಾನು ಮಾಡಿದ ದಾನ– ಧರ್ಮಗಳು ನನ್ನನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದವೇ ಹೊರತು ಕೆಳಗಿಳಿಸಲಿಲ್ಲ. ಇದು ನನ್ನ ಅನುಭವ’ ಎಂದು ಕಾರ್ಯಕ್ರಮವೊಂದರಲ್ಲಿ ಶಿವಶಂಕರಪ್ಪ ಅವರು ಅಭಿಪ್ರಾಯಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.