ದಾವಣಗೆರೆ: ಕ್ಯಾನ್ಸರ್ಗೆ ತುತ್ತಾಗಿ ಗುಣಮುಖಳಾಗಿದ್ದ ನಗರದ ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ಪ್ರಕಟವಾಗಿರುವ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶೇ 93.44ರಷ್ಟು (625ಕ್ಕೆ 584) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ವಿದ್ಯಾರ್ಥಿನಿ 9ನೇ ತರಗತಿಯಲ್ಲಿ ಓದುತ್ತಿರುವಾಗ ರಕ್ತದ ಕ್ಯಾನ್ಸರ್ (ಅಕ್ಯೂಟ್ ಮೈಲಾಯ್ಡ್ ಲ್ಯುಕೇಮಿಯಾ) ದೃಢಪಟ್ಟಿತ್ತು. ಕ್ಯಾನ್ಸರ್ ಚಿಕಿತ್ಸೆಗೆ ₹ 13.60 ಲಕ್ಷ ಖರ್ಚಾಗುವುದಾಗಿ ವೈದ್ಯರು ತಿಳಿಸಿದ್ದರು. ಗಾರೆ ಕೆಲಸ, ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿರುವ ವಿದ್ಯಾರ್ಥಿನಿಯ ಪಾಲಕರು ಅಷ್ಟೊಂದು ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದರು. ಆಗ ಶಾಲೆಯ ಗಣಿತ ಶಿಕ್ಷಕ ಕೆ.ಟಿ.ಜಯಪ್ಪ ಹಾಗೂ ಮಂಗಳೂರಿನ ಜುಲೇಖಾ ಯೇನೆಪೋಯ ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸಿದ್ದರು. ಅನಾರೋಗ್ಯದಿಂದಾಗಿ ಈಕೆಗೆ 2023–24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖಳಾದ ಬಳಿಕ ಸಂಪೂರ್ಣ ಹಾಜರಾತಿಯೊಂದಿಗೆ 2024–25ನೇ ಶೈಕ್ಷಣಿಕ ಸಾಲಿನಲ್ಲಿ ಈ ಸಾಧನೆ ಮಾಡಿದ್ದಾಳೆ.

‘ಶಿಕ್ಷಕರ ಪ್ರೋತ್ಸಾಹದಿಂದಾಗಿ ಇಷ್ಟು ಅಂಕಗಳನ್ನು ಗಳಿಸಲು ಸಾಧ್ಯವಾಗಿದೆ. ಪಾಠದ ಬಗ್ಗೆ ಶಿಕ್ಷಕರಿಗೆ ಎಷ್ಟೇ ಹೊತ್ತಲ್ಲಿ ಕರೆ ಮಾಡಿದಾಗಲೂ ಸಹಕರಿಸಿದರು. ವಿಜ್ಞಾನದಲ್ಲಿ ಪಿಯುಸಿ ಓದಿ ಐಎಎಸ್ ಅಧಿಕಾರಿಯಾಗುವ ಕನಸಿದೆ’ ಎಂದು ವಿದ್ಯಾರ್ಥಿನಿ ‘ಪ್ರಜಾವಾಣಿ’ಗೆ ತಿಳಿಸಿದಳು.

‘ವಿದ್ಯಾರ್ಥಿನಿಯ ಸಾಧನೆ ಸಂತಸ ತಂದಿದೆ. ಶಾಲೆಯ ಇತಿಹಾಸದಲ್ಲಿ ವಿದ್ಯಾರ್ಥಿನಿಯೊಬ್ಬಳು ಇಷ್ಟು ಅಂಕ ಪಡೆದಿರುವುದು ಇದೇ ಮೊದಲು. ಆಕೆಯಲ್ಲಿ ಓದಿನ ತುಡಿತ ಎಷ್ಟಿತ್ತೆಂದರೆ ಚಿಕಿತ್ಸೆ ಕಾರಣ ಆಸ್ಪತ್ರೆಗೆ ತೆರಳಿದ್ದರೂ ಕರೆ ಮಾಡಿ ಆ ದಿನದ ಪಾಠವನ್ನು ಕೇಳಿಕೊಂಡು ಅಭ್ಯಾಸ ಮಾಡುತ್ತಿದ್ದಳು. ಮನೆಯಲ್ಲಿ ಕಲಿಕೆಯ ವಾತಾವರಣ ಇರದಿದ್ದರೂ ಈ ಮಟ್ಟದ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದು ಮುಖ್ಯಶಿಕ್ಷಕ ಎಂ.ಸುರೇಶ್ ಹರ್ಷ ವ್ಯಕ್ತಪಡಿಸಿದರು.

‘ನಮ್ಮ ಶಾಲೆಯಲ್ಲಿ ಕೂಲಿಕಾರ್ಮಿಕರ ಮಕ್ಕಳೇ ಹೆಚ್ಚಿದ್ದಾರೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ನೀಡಲಿ ಎಂದು ಬೆಳಿಗ್ಗೆ 6ಕ್ಕೆ ಶಾಲೆಗೆ ಕರೆಸಿ ಓದಿಸುತ್ತಿದ್ದೆವು. ಮತ್ತೆ 9.30ರಿಂದ ಸಂಜೆ 4.30ರವರೆಗೆ ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ಸಂಜೆ 5.30ರಿಂದ ರಾತ್ರಿ 8ರವರೆಗೆ ಶಾಲೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದರು. ಸತತ ಪ್ರಯತ್ನದ ಫಲವಾಗಿ ಉನ್ನತ ಶ್ರೇಣಿಯಲ್ಲಿ ಐವರು, ಪ್ರಥಮ ಶ್ರೇಣಿಯಲ್ಲಿ 21, ದ್ವಿತೀಯ ಶ್ರೇಣಿಯಲ್ಲಿ 8 ಜನ ಹಾಗೂ ತೃತೀಯ ಶ್ರೇಣಿ ನಾಲ್ವರು ಉತ್ತೀರ್ಣರಾಗಿದ್ದಾರೆ’ ಎಂದು ಶಿಕ್ಷಕ ಕೆ.ಟಿ. ಜಯಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.