ದಾವಣಗೆರೆ: ಕಣ್ಣು ಕಾಣದ, ಶ್ರವಣದೋಷ ಇರುವ, ನಿಧಾನ ಕಲಿಕೆ ಸಮಸ್ಯೆಯುಳ್ಳ ಸುಮಾರು ಮೂರು ವರ್ಷದ ಹೆಣ್ಣು ಮಗುವನ್ನು ಹೆತ್ತವರು ಹೈಸ್ಕೂಲ್ ಮೈದಾನದ ಬಳಿಕ ಖಾಸಗಿ ಬಸ್ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ.

ಮಗುವಿನ ಬಟ್ಟೆಗಳನ್ನು ಇಟ್ಟು, ಕೈಯಲ್ಲಿ ನೀರಿನ ಬಾಟಲಿ, ಬಿಸ್ಕತ್, ಚಿಪ್ಸ್ ನೀಡಿ ಮಗುವನ್ನು ಕೂರಿಸಿ ಹೋಗಿದ್ದಾರೆ. ಬಳಿಕ ಚೈಲ್ಡ್ಲೈನ್ಗೆ ಈ ಬಗ್ಗೆ ಯಾರೋ ಕರೆ ಮಾಡಿದ್ದಾರೆ. ಮಕ್ಕಳ ರಕ್ಷಣಾ ಘಟಕಕ್ಕೂ ಕರೆ ಹೋಗಿದೆ. ಚೈಲ್ಡ್ಲೈನ್ನ ಸಿಬ್ಬಂದಿ ಬಂದು ಮಗುವನ್ನು ತಂದು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಅವರು ಮಕ್ಕಳ ರಕ್ಷಣಾ ಘಟಕದ ವಶಕ್ಕೆ ನೀಡಿದ್ದಾರೆ.

ಕೋವಿಡ್–19 ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಗಂಟಲು ದ್ರವ ಸಂಗ್ರಹಿಸಲಾಗಿದೆ.

‘ಇದುವಿಶೇಷ ಆರೈಕೆ ಅಗತ್ಯ ಇರುವ ಮಗು. ನಮ್ಮಲ್ಲಿ ವಿಶೇಷ ಆರೈಕೆ ಕೇಂದ್ರ ಇಲ್ಲ. ಬೆಂಗಳೂರಿನಲ್ಲಿದೆ. ಈಗ ಕೊರೊನಾ ಹೆಚ್ಚುತ್ತಿರುವುದರಿಂದ ಅಲ್ಲಿಗೆ ಕಳುಹಿಸುವ ಸ್ಥಿತಿ ಇಲ್ಲ. ಹೀಗಾಗಿ ಇಲ್ಲಿನ ದತ್ತು ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿಮಗುವನ್ನು ಇಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಇತರ ಮಕ್ಕಳೊಂದಿಗೆ ಬೆರೆಯದಂತೆ ಕ್ರಮ ಕೈಗೊಂಡಿದ್ದೇವೆ. ಮಗುವನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾಗಿರುವ ಶೃತಿ ಎಚ್.ಎನ್. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಗುವಿನ ಹೆತ್ತವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.