ದಾವಣಗೆರೆ: ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯ ವಸೂಲು ಮಾಡಲು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಪಡೆ ರಾಜ್ಯದಲ್ಲೇ ಮೊದಲ ಬಾರಿಗೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಜನರ ಮನೆ ಬಾಗಿಲಿಗೆ ತೆರಳುವ ಸ್ತ್ರೀಯರು, ತೆರಿಗೆ ಸಂಗ್ರಹಿಸುತ್ತಿದ್ದಾರೆ.

‘ಡೇ-ನಲ್ಮ್’ ಅಭಿಯಾನದಡಿ ರಚನೆಯಾಗಿರುವ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರನ್ನು ತೆರಿಗೆ ವಸೂಲಾತಿಗೆ ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಸ್ತ್ರೀಶಕ್ತಿ ಸಂಘಗಳನ್ನು ಗುರುತಿಸಿ, ಅರ್ಹರನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿತ್ತು. ಈ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದ ದಾವಣಗೆರೆ ಮಹಾನಗರ ಪಾಲಿಕೆಯು ತೆರಿಗೆ ಸಂಗ್ರಹಕ್ಕೆ 12 ಮಹಿಳೆಯರನ್ನು ನೇಮಕ ಮಾಡಿಕೊಂಡಿದೆ.

10 ಮಹಾನಗರ ಪಾಲಿಕೆ, 61 ನಗರಸಭೆ ಸೇರಿದಂತೆ ರಾಜ್ಯದಲ್ಲಿ 315 ನಗರ ಸ್ಥಳೀಯ ಸಂಸ್ಥೆಗಳಿವೆ. ನೀರಿನ ಕಂದಾಯ ಮತ್ತು ಆಸ್ತಿ ತೆರಿಗೆ ಸಂಗ್ರಹದಲ್ಲಿ ಬಹುತೇಕ ಸ್ಥಳೀಯ ಸಂಸ್ಥೆಗಳು ಹಿಂದೆ ಬಿದ್ದಿವೆ. ಬಾಕಿಯೂ ಸೇರಿದಂತೆ ಆಯಾ ವರ್ಷದ ತೆರಿಗೆ ಸಂಗ್ರಹಕ್ಕೆ ‘ಸ್ತ್ರೀ ಶಕ್ತಿ’ಯನ್ನು ಬಳಸಿಕೊಳ್ಳಲು ರಾಜ್ಯ ಸಚಿವ ಸಂಪುಟ 2024ರ ಜೂನ್ನಲ್ಲಿ ಅನುಮೋದನೆ ನೀಡಿತ್ತು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿಗೆ ಉತ್ಸುಕತೆ ತೋರಿದ ಸ್ವಸಹಾಯ ಸಂಘದ ಮಹಿಳೆಯರಿಂದ 77 ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಂವಹನ ಸಾಮರ್ಥ್ಯ ಹಾಗೂ ಡಿಜಿಟಲ್ ಸಾಕ್ಷರತೆ ಪರಿಶೀಲಿಸಿ ಅರ್ಹ 25 ಸ್ತ್ರೀಯರನ್ನು ಗುರುತಿಸಲಾಗಿತ್ತು. ತೆರಿಗೆ ವಸೂಲಾತಿ ನಿರ್ವಹಣೆಯ ತರಬೇತಿಯ ಬಳಿಕ ಅಂತಿಮವಾಗಿ 12 ಜನ ಮಹಿಳೆಯರು ಕೆಲಸ ಆರಂಭಿಸಿದ್ದಾರೆ. ಇವರಿಗೆ ವಸೂಲಾದ ತೆರಿಗೆಯ ಮೊತ್ತದಲ್ಲಿ ಶೇ 5ರಷ್ಟನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ.

ನೇಮಕಗೊಂಡ ಮಹಿಳೆಯರಿಗೆ ವಾರ್ಡ್ವಾರು ಹೊಣೆ ನಿಗದಿಪಡಿಸಲಾಗಿದೆ. ತೆರಿಗೆ ಸಂಗ್ರಹಕ್ಕೆ ಪಾಲಿಕೆ ವತಿಯಿಂದ ಉಪಕರಣವೊಂದನ್ನು (ಪಿಒಎಸ್) ನೀಡಲಾಗಿದೆ. ತೆರಿಗೆಗೆ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಗದು ರೂಪದಲ್ಲಿ ತೆರಿಗೆ ಸಂಗ್ರಹಕ್ಕೆ ಅನುಮತಿ ನೀಡಿಲ್ಲ. ಕರ ವಸೂಲಿಗಾರರ ಕೊರತೆಯನ್ನು ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ನೀಗಿಸಿದ್ದಾರೆ.

‘ತೆರಿಗೆ ಸಂಗ್ರಹಕ್ಕೆ ಮನೆಬಾಗಿಲಿಗೆ ತೆರಳಿದಾಗ ಜನರು ಅನುಮಾನದಿಂದ ನೋಡುತ್ತಿದ್ದಾರೆ. ಪಾಲಿಕೆ ವತಿಯಿಂದ ನೀಡಿದ ಗುರುತಿನ ಚೀಟಿ ತೋರಿಸಿ ಪಿಒಎಸ್ ಉಪಕರಣದಲ್ಲಿ ಪರಿಶೀಲಿಸುತ್ತೇವೆ. ಜನರ ಮನವೊಲಿಸಿ ತೆರಿಗೆ ಸಂಗ್ರಹಿಸುತ್ತಿದ್ದೇವೆ. ಮೇ ತಿಂಗಳಲ್ಲಿ ಒಬ್ಬಳೇ ₹5.5 ಲಕ್ಷ ತೆರಿಗೆ ಸಂಗ್ರಹಿಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ವಿಜಯಲಕ್ಷ್ಮಿ ಹಳ್ಳಿಕೆರೆ.

‘ಉಪಕರಣವೊಂದನ್ನು ಕೈಯಲ್ಲಿ ಹಿಡಿದು ಮಹಿಳೆಯೊಬ್ಬರು ಮನೆ ಬಾಗಿಲಿಗೆ ಬಂದಿದ್ದರು. ಮಹಾನಗರ ಪಾಲಿಕೆ ತೆರಿಗೆ ಸಂಗ್ರಹಕ್ಕೆ ಮಹಿಳೆಯರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇರಲಿಲ್ಲ. ಪಾಲಿಕೆ ಕಚೇರಿಗೆ ತೆರಳಿ ತೆರಿಗೆ ಪಾವತಿಸುವುದಾಗಿ ಹೇಳಿ ಮಹಿಳೆಯನ್ನು ವಾಪಸ್ ಕಳುಹಿಸಿದೆವು. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಿದರೆ ಅನುಕೂಲ’ ಎನ್ನುತ್ತಾರೆ ಎಂಸಿಸಿ ಬಡಾವಣೆಯ ಮಂಜಪ್ಪ.

ಮಹಿಳೆಯರ ಜೀವನೋಪಾಯಕ್ಕೆ ಇದೊಂದು ಹೊಸ ಮಾರ್ಗವಾಗಿದೆ. ಸಾರ್ವಜನಿಕರು ವಿನಾಕಾರಣ ದಂಡ ಕಟ್ಟುವುದು ತಪ್ಪಿದೆ. ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಕಾಣತೊಡಗಿದೆ
ರೇಣುಕಾ ಆಯುಕ್ತೆ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.