ಹೆಚ್ಚಿನ ಬಾಡಿಗೆ ಕೇಳುವುದು ವಿಪರೀತ ಹೊಗೆ ಉಗುಳುವಂಥ ಆಟೊಗಳ ಫೋಟೊ ತೆಗೆದು ಸಾರ್ವಜನಿಕರು 94495 45299 ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಿದರೆ ನಾವು ಕ್ರಮ ಕೈಗೊಳ್ಳುತ್ತೇವೆ
ಶ್ರೀಕಾಂತ ಬಡಿಗೇರ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ
ಆರ್‌ಟಿಒ ನೇತೃತ್ವದಲ್ಲಿ ಸಂಚಾರ ಪೊಲೀಸ್ ಪಾಲಿಕೆಯವರನ್ನು ಸೇರಿಸಿ ಸಮಿತಿ ರಚಿಸಿದ್ದೇನೆ. ಆಟೊ ಮಾಲೀಕರೊಂದಿಗೆ ಸಭೆ ನಡೆಸಿ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ಶೀಘ್ರವೇ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದೇನೆ
ದಿವ್ಯಪ್ರಭು ಧಾರವಾಡ ಜಿಲ್ಲಾಧಿಕಾರಿ
ದಿವ್ಯಪ್ರಭು
‘ಹೊಣೆ ನಿಭಾಯಿಸದ ಆಡಳಿತ’
‘ಸರ್ಕಾರದವರು ಎಲ್ಲೆಂದರಲ್ಲಿ ರಸ್ತೆ ಅಗೆದು ಸಂಚಾರಕ್ಕೆ ಅಡ್ಡಿ ಮಾಡುತ್ತಲೇ ಇರುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಸುಸಜ್ಜಿತ ಆಟೊ ನಿಲ್ದಾಣಗಳನ್ನು ನಿರ್ಮಿಸಿಕೊಡಬೇಕಿತ್ತು. ಅದೂ ಕಾರ್ಯಗತವಾಗಿಲ್ಲ. ಸರಿಯಾಗಿ ಸೌಕರ್ಯ ಕೊಡದೆ ನಮ್ಮನ್ನು ಮಾತ್ರ ನಿಯಂತ್ರಿಸಲು ಬಯಸುತ್ತಾರೆ’ ಎಂದು ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು. ‘ಹಿಂದೊಮ್ಮೆ ಮೀಟರ್ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಆದರೆ ಆ ಮೀಟರ್‌ನ ಒಂದು ಸಣ್ಣ ತಂತಿ– ಕೇಬಲ್ ಕಿತ್ತು ಹೋದರೂ ₹50ರಲ್ಲಿ ಆಗುವ ದುರಸ್ತಿ ಕೆಲಸಕ್ಕೆ ₹300–₹400 ಕೇಳುತ್ತಾರೆ. ಹೀಗೆ ಸಾಕಷ್ಟು ಸಮಸ್ಯೆಗಳಿರುವ ಕಾರಣಕ್ಕೇ ಈ ಯೋಜನೆಗೆ ಸಮರ್ಪಕ ಬೆಂಬಲ ದೊರೆತಿಲ್ಲ’ ಎಂದರು.