ಮಂಗಳವಾರ, ಮೇ 11, 2021
21 °C

ಅನಗತ್ಯ ಸಂಚರಿಸಿದವರಿಗೆ ಬಸ್ಕಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‌ಡೌನ್ ನಿಮಿತ್ತ‌ ನಗರದಲ್ಲಿ ಅಂಗಡಿ ಬಾಗಿಲುಗಳು ಮುಚ್ಚಿದ್ದರೂ ವಾಹನಗಳ ಸಂಚಾರ ಹೆಚ್ಚಾಗಿತ್ತು. ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.

ನಗರದ ಆರ್‌ಟಿಒ ವೃತ್ತದ ಬಳಿ ನಿಯಮ ಉಲ್ಲಂಘಿಸಿ ಪದೇ ಪದೇ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವಾಹನ ಸವಾರೊಬ್ಬರಿಗೆ ಪೊಲೀಸರು ಬಸ್ಕಿ ಹೊಡಿಸಿ ಎಚ್ಚರಿಕೆ ನೀಡಿದರು.

₹ 38 ಸಾವಿರ ದಂಡ: ಮಾಸ್ಕ್ ಧರಿಸದೇ ಅನಗತ್ಯವಾಗಿ ಸಂಚರಿಸುವವರ ವಿರುದ್ಧ 309 ಪ್ರಕರಣ ದಾಖಲಿಸಿ ₹38,850 ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ
ತಿಳಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು