ಹುಬ್ಬಳ್ಳಿ: ಇಲ್ಲಿನ ಕೆಎಂಸಿ–ಆರ್ಐ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿನಿ ಆನ್ಲೈನ್ನಲ್ಲಿ ಪರಿಚಯವಾದ ಯುವಕ ರಜತ ಎಂಬುವವನ ಜೊತೆ ವಿವಸ್ತ್ರವಾಗಿ ವಾಟ್ಸ್ಆ್ಯಪ್ ಚಾಟ್, ವಿಡಿಯೊ ಕಾಲ್ ಮಾಡಿದ್ದು, ಅದನ್ನು ರೆಕಾರ್ಡಿಂಗ್ ಮಾಡಿಕೊಂಡಿದ್ದ ಅವನು ನಕಲಿ ಖಾತೆ ತೆರೆದು ಮಾನ ಹರಾಜು ಹಾಕುತ್ತಿರುವ ಕುರಿತು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಮೂಲದ ವಿದ್ಯಾರ್ಥಿನಿ, ಕೆಎಂಸಿ–ಆರ್ಐ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಉತ್ತರ ಪ್ರದೇಶದ ರಜತ ಶರ್ಮ ಆನ್ಲೈನ್ನಲ್ಲಿ ಪರಿಚಯವಾಗಿದ್ದು, ಕರೋಕೆ ಲಾಂಜ್ ಆ್ಯಪ್ ಮೂಲಕ ಇಬ್ಬರೂ ಹಾಡುತ್ತಿದ್ದರು. ನಂತರ ವಿಡಿಯೊ ಕಾಲ್, ವಾಟ್ಸ್ಆ್ಯಪ್ ಚಾಟ್, ಟೆಲಿಗ್ರಾಮ್ ವಿಡಿಯೊ, ಸ್ನ್ಯಾಪ್ಚಾಟ್, ಇನ್ಸ್ಟಾಗ್ರಾಮ್, ಪಿಂಟರೆಸ್ಟ್, ಇ–ಮೇಲ್ ಮತ್ತು ಎಸ್ಎಂಎಸ್ ಮುಖಾಂತರ ಸಂಪರ್ಕ ಇಟ್ಟುಕೊಂಡಿದ್ದರು. ರಜತ ಒಂಬತ್ತು ವಾಟ್ಸ್ಆ್ಯಪ್ ನಂಬರ್ಗಳಿಂದ ವಿದ್ಯಾರ್ಥಿನಿ ಜೊತೆ ವಿಡಿಯೊ ಕಾಲ್ ಮತ್ತು ಚಾಟ್ ಮಾಡುತ್ತಿದ್ದನು.

ಆರೋಪಿ ರಜತ ಹೇಳಿದ ಹಾಗೆ ವಿದ್ಯಾರ್ಥಿನಿ ವಿವಸ್ತ್ರಳಾಗಿ ಮಾಡಿರುವ ವಿಡಿಯೊ ಕಾಲ್ಗಳ ಫೋಟೊ ತೆಗೆದು ರೆಕಾರ್ಡಿಂಗ್ ಮಾಡಿಕೊಂಡಿದ್ದನು. ನಂತರ ವಿದ್ಯಾರ್ಥಿನಿ ಹೆಸರಲ್ಲಿಯೇ ಇನ್ಸ್ಟಾಗ್ರಾಮ್ ನಕಲಿ ಗ್ರೂಪ್ ತೆರೆದು, ಅಶ್ಲೀಲ ಫೋಟೊ ಹಾಕಿ ‘ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ, ಚಾಟ್ ಮಾಡಿ’ ಎಂದು ಅಡಿಬರಹ ಬರೆದಿದ್ದಾನೆ. ಇ–ಮೇಲ್ನಲ್ಲಿ ಸಂದೇಶ ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತ ಮಾನ ಹರಾಜು ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ವಿದ್ಯಾರ್ಥಿನಿ ತಿಳಿಸಿದ್ದಾರೆ.

ಅಣ್ಣನಿಂದ ತಮ್ಮ ಕೊಲೆ: ಮದ್ಯ ಸೇವನೆ ಮಾಡಿ ಮನೆಗೆ ಬಂದು ಮಾನಸಿಕ ಹಿಂಸೆ ನೀಡುತ್ತಿದ್ದ ತಮ್ಮನ ಮೇಲೆ ಕೋಪಗೊಂಡ ಅಣ್ಣ, ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಪ್ರಕರಣ ತಾಲ್ಲೂಕಿನ ಮಂಟೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ತಮ್ಮ ಅಂದಾನಪ್ಪ ಹೊನ್ನಾಪುರ (30) ಅವಾಚ್ಯವಾಗಿ ಬೈದು ಹಲ್ಲೆ ಮಾಡುತ್ತಿದ್ದ ಎಂದು ಕೋಪಗೊಂಡ ಅಣ್ಣ ಮೈಲಾರಪ್ಪ ಹೊನ್ನಾಪುರ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಮನೆಯಲ್ಲಿ ಬಿದ್ದಿದ್ದ ರಕ್ತವನ್ನು ಸ್ವಚ್ಛಗೊಳಿಸಿ, ಕೃತ್ಯಕ್ಕೆ ಬಳಸಿದ ಕಟ್ಟಿಗೆಯನ್ನು ಎಸೆದು ಸಾಕ್ಷಿ ನಾಶ ಮಾಡಿದ್ದಾನೆ ಎಂದು ಮಹಾದೇವ ಹೊನ್ನಾಪುರ ದೂರಿನಲ್ಲಿ ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.