ಧಾರವಾಡ: ರೈತನ ಪುತ್ರಿ ಐಶ್ವರ್ಯಾ ಬಸರಿಕಟ್ಟಿ ಹಾಗೂ ಕೃಷಿ ಕೂಲಿಕಾರ ಮಹಿಳೆಯ ಪುತ್ರ ಕಾರ್ತಿಕ ಚಿಗರಿ ಕೃಷಿ ಪದವಿಯಲ್ಲಿ (ಬಿ.ಎಸ್ಸಿ –ಆನರ್ಸ್) ತಲಾ ನಾಲ್ಕು ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾರೆ.

ಕೃಷಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಘಟಿಕೋತ್ಸವದಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಕಾಮನಹಳ್ಳಿಯ ಭೀಮಪ್ಪ ಬಸರಿಕಟ್ಟಿ ಮತ್ತು ಸವಿತಾ ದಂಪತಿಯ ಪುತ್ರಿ ಐಶ್ವರ್ಯಾ ಬಸರಿಕಟ್ಟಿ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ತಿಳಿಗೊಳ ಗ್ರಾಮದ ಮಲ್ಲಕಪ್ಪ ಮತ್ತು ಕಸ್ತೂರಿಬಾಯಿ ದಂಪತಿ ಪುತ್ರ ಕಾರ್ತಿಕ ಚಿಗರಿ ಅವರು ಸಾಧನೆಯ ನಗೆ ಬೀರಿದರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇಬ್ಬರಿಗೂ ಪದಕ ಪ್ರದಾನ ಮಾಡಿದರು.

‘ನಮ್ಮ ಪೋಷಕರು ಕೃಷಿ ಮಾಡುತ್ತಾರೆ. ಒಂದು ಎಕರೆಗೂ ಕಡಿಮೆ ಜಮೀನು ಇದೆ. ಜೋಳ ಬೆಳೆಯುತ್ತೇವೆ. ಎಸ್ಎಸ್ಎಲ್ಸಿಯಲ್ಲಿ ಶೇ 95 ಹಾಗೂ ಪಿಯುನಲ್ಲಿ ಶೇ 97 ಅಂಕ ಪಡೆದಿದ್ದೆ. ಕೃಷಿ ಕೋರ್ಸ್ ವ್ಯಾಸಂಗ ಮಾಡುವ ಕನಸು ನನಗಿತ್ತು, ಅದು ಈಗ ಈಡೇರಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಅಧಿಕಾರಿಯಾಗುವ ಗುರಿ ಇದೆ’ ಎಂದು ಐಶ್ವರ್ಯಾ ಬಸರಿಕಟ್ಟಿ ತಿಳಿಸಿದರು.

‘ನಮ್ಮ ಅಪ್ಪ ತೀರಿಕೊಂಡಿದ್ದಾರೆ. ಅಮ್ಮ ಕೂಲಿ ಮಾಡುತ್ತಾರೆ. ಜಮೀನು ಇದೆ, ತೊಗರಿ ಬೆಳೆಯುತ್ತೇವೆ. ಎಸ್ಎಸ್ಎಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಶೇ 93, ಪಿಯುನಲ್ಲಿ ಶೇ 95 ಅಂಕ ಪಡೆದಿದ್ದೆ. ಕೃಷಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ ಮಾಡುವ ಗುರಿ ಇದೆ. ಕೃಷಿ ವಿಜ್ಞಾನಿ ಆಗುವ ಕನಸು ಇದೆ’ ಎಂದು ಕಾರ್ತಿಕ ಚಿಗರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.