ಹುಬ್ಬಳ್ಳಿ ಉಪನಗರ ಕೇಂದ್ರ (ಹಳೇ) ಬಸ್ ನಿಲ್ದಾಣದಲ್ಲಿ ಅಳವಡಿಸಿದ ಆಸನಗಳು ತುಕ್ಕು ಹಿಡಿದಿವೆ
ಸ್ಥಗಿತವಾಗಿದ್ದ ಉಪನಗರ ಕೇಂದ್ರ ಬಸ್ ನಿಲ್ದಾಣ ಪುನರಾರಂಭವಾಗಿದೆ. ನಗರ ಹಾಗೂ ಉಪನಗರ ಸಾರಿಗೆ ಬಸ್‌ಗಳ ಸಂಚಾರವನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು
ಪ್ರಿಯಾಂಗಾ ಎಂ. ವ್ಯವಸ್ಥಾಪಕ ನಿರ್ದೇಶಕಿ ವಾಕರಸಾಸಂ
ಭಾಗಶಃ ರಸ್ತೆ ಮುಕ್ತಗೊಳಿಸಿದ್ದು ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೇಲ್ಸೇತುವೆಯ ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ
ಮಹೇಶ ಟೆಂಗಿನಕಾಯಿ ಶಾಸಕ
ತುಕ್ಕು ಹಿಡಿದ ಆಸನಗಳು
ಪ್ರಸ್ತುತ ವರ್ಷದ ಆರಂಭದಲ್ಲಿ ಉದ್ಘಾಟನೆಯಾಗಿದ್ದ ಉಪನಗರ ಕೇಂದ್ರ ಬಸ್ ನಿಲ್ದಾಣ ಏಪ್ರಿಲ್ ತಿಂಗಳಿನಿಂದ ನಾಲ್ಕೂವರೆ ತಿಂಗಳು ಸಂಪೂರ್ಣ ಸ್ಥಗಿತವಾಗಿದ್ದರಿಂದ ಅಲ್ಲಿರುವ ಕೆಲ ಸಾಮಗ್ರಿಗಳು ಹಾಳಾಗಿವೆ. ಪ್ರಯಾಣಿಕರ ಸೌಲಭ್ಯಕ್ಕಾಗಿ ಅಳವಡಿಸಿದ್ದ ಎಕ್ಸಿಲೇಟರ್ ಕಾರ್ಯನಿರ್ವಹಿಸುತ್ತಿಲ್ಲ. ನೆಲಮಹಡಿಯಿಂದ ಎರಡನೇ ಮಹಡಿಯವರೆಗೆ ತೆರಳಲೆಂದು ಅಳವಡಿಸಿರುವ ಲಿಫ್ಟ್ ಹಾಳಾಗಿದ್ದು ವಿದ್ಯುತ್ ಸಂಪರ್ಕ ಸ್ಥಿತಿಯಲ್ಲಿಯೇ ಬಾಗಿಲು ಭಾಗಶಃ ಭಾಗ ತೆರೆದುಕೊಂಡಿದೆ. ಮೇಲ್ಮಹಡಿಯ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಿದ್ದ ಕಬ್ಬಿಣದ ಆಸನಗಳೆಲ್ಲ ತುಕ್ಕು ಹಿಡಿದಿವೆ.