‘ಹೆಚ್ಚುವರಿ ನಗರ ಸಾರಿಗೆ ಬಸ್ ಅವಶ್ಯ’
ಹುಬ್ಬಳ್ಳಿ ನಗರದಲ್ಲಿ ಕೆಎಂಸಿಆರ್‌ಐ ಆಸ್ಪತ್ರೆ (ಕಿಮ್ಸ್) ಇಸ್ಕಾನ್ ದೇವಸ್ಥಾನ ಕಾನೂನು ವಿಶ್ವವಿದ್ಯಾಲಯ ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ಶಾಲೆ ಕಾಲೇಜುಗಳು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ 55 ಬಸ್ ಡಿಪೊ ಪ್ರಾದೇಶಿಕ ಕಾರ್ಯಾಗಾರ ಘಟಕ ಬಸ್ ತಯಾರಿಕಾ ಘಟಕ ಮತ್ತು ಪ್ರಾದೇಶಿಕ ತರಬೇತಿ ಕೇಂದ್ರ. ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ತಪೋವನ ಸಾಧನಕೇರಿ ಉದ್ಯಾನ ಸೇರಿದಂತೆ ಪ್ರಮುಖ ಸ್ಥಳಗಳಿವೆ. ನಿತ್ಯ ಎರಡೂ ನಗರಗಳ ವ್ಯಾಪ್ತಿಯಲ್ಲಿಯೇ ಒಂದೂವರೆ ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಎರಡೂ ನಗರಗಳಲ್ಲಿ ಇನ್ನೂ ಹೆಚ್ಚುವರಿಯಾಗಿ ನಗರ ಸಾರಿಗೆ ಬಸ್‌ಗಳು ಬೇಕಿದೆ’ ಎಂದು ಹೆಸರು ಹೇಳಲು ಇಚ್ಛಿಸಿದ ಸಂಸ್ಥೆಯ ಸಿಬ್ಬಂದಿಯೊಬ್ಬರು ಹೇಳುತ್ತಾರೆ.